Advertisement
ಈ ಕುರಿತು ಮಾಹಿತಿ ನೀಡಿದ ಅವರು ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಗಡಿಭಾಗದ ಭದ್ರಾದ್ರಿ ಕೊತಗುಡೆಂ ಜಿಲ್ಲೆ ಮತ್ತು ತೆಲಂಗಾಣದ ಪಿಂಪಾಕ ಮಂಡಲ್ ಕಾರ್ಕಗುಡೆಂ ಅರಣ್ಯದಲ್ಲಿ ನಕ್ಸಲರ ಚಲನವಲನದ ಕುರಿತು ಮಾಹಿತಿ ಪಡೆದ ಭದ್ರತಾ ಸಿಬಂದಿ ಹಾಗೂ ಪೊಲೀಸರು ಗುರುವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ ಈ ವೇಳೆ ಭದ್ರತಾ ಸಿಬಂದಿ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ ಇದಕ್ಕೆ ಪ್ರತಿಯಾಗಿ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದು ಈ ವೇಳೆ ಆರು ನಕ್ಸಲರು ಹತರಾಗಿದ್ದಾರೆ. ಜೊತೆಗೆ ಎನ್‌ಕೌಂಟರ್ ನಲ್ಲಿ ಇಬ್ಬರು ಭದ್ರತಾ ಸಿಬಂದಿ ಗಾಯಗೊಂಡಿದ್ದು ಅವರನ್ನು ಭದ್ರಾಚಲಂ ಆಸ್ಪತ್ರೆಗೆ ದಾಖಲಿಸಲಾಗಿದ್ದು ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.
ನಕ್ಸಲ್ ಚಟುವಟಿಕೆ ವಿರುದ್ಧ ಕಾರ್ಯಾಚರಣೆಗಿಳಿದಿರುವ ಭದ್ರತಾ ಪಡೆಯಿಂದ ತಪ್ಪಿಸಿಕೊಳ್ಳಲು ನಕ್ಸಲರು ಛತ್ತೀಸ್ ಗಢದಿಂದ ತೆಲಂಗಾಣಕ್ಕೆ ಪಲಾಯನಗೈಯುತ್ತಿದ್ದರು ಎನ್ನಲಾಗಿದೆ ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ತಂಡ ಕಾರ್ಯಾಚರಣೆಗೆ ಇಳಿದಿದೆ ಎಂದು ಎಸ್ಪಿ ಪಂಕಜ್ ಪರಿತೋಷ್ ತಿಳಿಸಿದ್ದಾರೆ.
Related Articles
ಸ್ಥಳೀಯ ಪೊಲೀಸರು ಹಾಗೂ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಆರು ಮಂದಿ ಹತರಾಗಿದ್ದು ಕುಂಜ ವೀರಯ್ಯ, ತುಳಸಿ, ಶುಕ್ರ, ಚಲೋ, ದುರ್ಗೇಶ್ ಮತ್ತು ಕೋಟೋ ಎಂದು ಗುರುತಿಸಲಾಗಿದೆ. ಎನ್‌ಕೌಂಟರ್ ನಡೆದ ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
Advertisement