ಬರೋಬ್ಬರಿ 600 ಕೋಟಿ ರೂ. ಮೌಲ್ಯದ ಆಸ್ತಿ! ನ.30ರಂದು ನಡೆಯಲಿರುವ ತೆಲಂಗಾಣ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಜಿ. ವಿವೇಕಾನಂದ ಹೊಂದಿರುವ ಆಸ್ತಿಯ ಮೌಲ್ಯವಿದು. ಅವರು ರಾಜ್ಯದ ಚೆನ್ನೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ವಿವೇಕಾನಂದ ರೆಡ್ಡಿ ಮತ್ತು ಅವರ ಪತ್ನಿ ಒಟ್ಟಾಗಿ 377 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಹೆಚ್ಚಾಗಿ ಅವರದ್ದೇ ವಿಸಾಕಾ ಕಂಪೆನಿ ಸಹಿತ ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರ ಕುಟುಂಬದ ಇತರ ಆಸ್ತಿ ಮೌಲ್ಯ 225 ಕೋಟಿ ರೂ. ಜತೆಗೆ ಅವರು ಸಾಲ ಸಹಿ ತ ಇತರ ವಿತ್ತೀಯ ಬಾಧ್ಯತೆಗಳ ಮೌಲ್ಯವೇ 41.5 ಕೋಟಿ ರೂ. ಕಾಂಗ್ರೆಸ್‌ನ ಮತ್ತೂಬ್ಬ ನಾಯಕ ಪಿ. ಶ್ರೀನಿವಾಸ ರೆಡ್ಡಿ 460 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಮೂಲಕ ರಾಜ್ಯದಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ.
ಕಾಮರೆಡ್ಡಿ ಈಗ ತೆಲಂಗಾಣದ ಪವರ್ ಪ್ಲೇಸ್
ಚುನಾವಣೆ ಹೊಸ್ತಿಲಿನಲ್ಲಿರುವ ತೆಲಂಗಾಣದಲ್ಲಿ ಜನರ ಚಿತ್ತ ನೆಟ್ಟಿರುವುದು ಕಾಮರೆಡ್ಡಿ ಕ್ಷೇತ್ರದತ್ತ. ಖುದ್ದು ಸಿಎಂ ಚಂದ್ರಶೇಖರ್ ರಾವ್ ಸ್ಪರ್ಧಿಸಲಿ ರುವ ಇದೇ ಕ್ಷೇತ್ರದಲ್ಲಿ ಅವರ ಕಟು ಟೀಕಾಕಾ ರರಾದ ಕಾಂಗ್ರೆಸ್‌ನ ತೆಲಂಗಾಣ ಘಟಕದ ಅಧ್ಯಕ್ಷ ಎ.ರೇವಂತ್ ರೆಡ್ಡಿ ಕೂಡ ಸ್ಪರ್ಧಿಸುತ್ತಿದ್ದು ಚುನಾವಣೆ ಪೈಪೋಟಿಗೆ ಈಗ ರಂಗೇರಿದಂತಾಗಿದೆ.
ಕಾಮರೆಡ್ಡಿಯಲ್ಲಿ ಕೆ.ಸಿ.ರಾವ್ ನಾಮಪತ್ರ ಸಲ್ಲಿಕೆಯ ಬಳಿಕವಂತೂ ಚುನಾವಣೆ ಕಾವು ಹೆಚ್ಚಿದೆ. ಎಲ್ಲ ಪಕ್ಷಗಳೂ ಇದೇ ಕ್ಷೇತ್ರ ದಿಂದ ತಮ್ಮ ಪ್ರಭಾವಿ ನಾಯಕರನ್ನು ಕಣಕ್ಕಿಳಿಸುತ್ತಿವೆ. ಬಿಜೆಪಿ ಕೆ.ವೆಂಕಟ ರಮಣ ರೆಡ್ಡಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿ ದ್ದರೆ, ಇತ್ತ ಕಾಂಗ್ರೆಸ್ ರೇವಂತ್ ರೆಡ್ಡಿಯನ್ನು ಕಣಕ್ಕಿಳಿಸಿದ್ದು ಕರ್ನಾ ಟಕ ಸಿಎಂ ಸಿದ್ದರಾಮಯ್ಯ ಕೂಡ ರೇವಂತ್ ಅವರ ನಾಮಪತ್ರ ಸಲ್ಲಿಕೆಗೆ ಜೊತೆಯಾಗಿ ಬೆಂಬಲ ಸೂಚಿಸಿದ್ದರು. ಕೆಸಿಆರ್ ಗಜ್ವಾಲ್‌ನಿಂದಲೂ ಸ್ಪರ್ಧಿಸುತ್ತಿರು ವುದು ಹೌದಾದರೂ ಅವರ ಸಂಪೂರ್ಣ ಗಮನ ಕಾಮ ರೆಡ್ಡಿಯತ್ತ ಇರುವುದು ಅಲ್ಲಿನ ಬೆಳವಣಿಗೆ ಗಳಿಗೆ ಸಾಕ್ಷಿಯಾಗಿದೆ. 2.45 ಲಕ್ಷ ಮತಗಳನ್ನು ಹೊಂದಿ ರುವ ಈ ಕ್ಷೇತ್ರ ಈ ಹಿಂದೆಲ್ಲಾ ಚರ್ಚೆಗೆ ಬಂದಿದ್ದು ಕಡಿಮೆ ಯೇ. ಕೃಷಿ ಪ್ರಧಾನ ಕ್ಷೇತ್ರವಾದ ಕಾಮರೆಡ್ಡಿಯಲ್ಲಿ ಜಮೀನು ಗಳ ಮೇಲೆ ಕಣ್ಣಿಟ್ಟು ಕೆಸಿಆರ್ ಇಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರೇವಂತ್ ಟೀಕಿಸಿದ್ದಾರೆ. ಅದಕ್ಕೆ ತಿರುಗೇಟು ನೀಡಿರುವ ಸಿಎಂ ಶಾಸಕರನ್ನು ಖರೀದಿ ಮಾಡಿ ಗೆಲ್ಲಲು ಹೊರಟಿದ್ದವರು (ರೇವಂತ್ ಮೇಲಿನ ಆರೋಪ) ನನ್ನ ವಿರುದ್ಧ ಜನರನ್ನು ಎತ್ತಿಕಟ್ಟಲು ನೋಡುತ್ತಿದ್ದಾರೆಂದು ಕೆಸಿಆರ್ ಆರೋಪಿಸಿದ್ದಾರೆ.