ಹೈದರಾಬಾದ್:ಇಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಪಕ್ಷದ ಪ್ರತಿಭಟನಾ ಸಭೆಯಲ್ಲಿ ಪ್ರಮುಖ ನಾಯಕರಿಬ್ಬರು ವೇದಿಕೆಯಲ್ಲೇ ಹೊಡೆದಾಡಿಕೊಂಡಿದ್ದಾರೆ.
Advertisement
ರಾಜ್ಯ ಪರೀಕ್ಷಾ ಮಂಡಳಿಯ ತಪ್ಪಿನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಮುಖಂಡರಾದ ಮುಡಿರಾಜ್ ಮತ್ತು ಹನುಮಂತರಾವ್ ಅವರು ವಾಗ್ವಾದ ನಡೆಸಿ ಪರಸ್ಪರಹೊಡೆದಾಡಿಕೊಂಡಿದ್ದಾರೆ.
ಪೊಲೀಸರು,ಹಲವು ಮುಖಂಡರು,ನೂರಾರು ಕಾರ್ಯಕರ್ತರ ಎದುರಲ್ಲೇ ಇಬ್ಬರು ಹೊಡೆದಾಡಿಕೊಳ್ಳುವ ಮೂಲಕ ಪಕ್ಷಕ್ಕೆ ತೀವ್ರ ಮುಜುಗರ ತಂದಿಟ್ಟಿದ್ದಾರೆ.