Advertisement
ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ಎಸ್ಸಿ, ಎಸ್ಟಿ ಕುಂದುಕೊರತೆ ಪರಿಶೀಲನ ಸಭೆಯನ್ನು ಆಯೋಜಿಸ ಲಾಗಿತ್ತು. ಸಭೆಯ ಅಧ್ಯಕ್ಷತೆ ವಹಿಸಬೇಕಾದ ತಹಶೀಲ್ದಾರ್ ಅವರು ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಎಸಿಬಿಯವರಿಂದ ಬಂಧಿಸ ಲ್ಪಟ್ಟಿರುವುದರಿಂದ ಅವರ ಪರವಾಗಿ ಉಪತಹಶೀಲ್ದಾರ್, ತಾಲೂಕು ಪಂಚಾಯತ್ ಇಒ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಸಭೆ ನಡೆಸಲು ಬಂದಿದ್ದರು. ಇದಕ್ಕೆ ಸಂಘಟನೆಯ ಮುಖಂಡರು ವಿರೋಧ ವ್ಯಕ್ತಪಡಿಸಿದರು.
ಸಭೆಗೆ ತಹಶೀಲ್ದಾರ್ ಅಥವಾ ಸಹಾ ಯಕ ಕಮಿಷನರ್ ಬರಬೇಕು. ಇಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ವಿಚಾರಗಳೇ ಹೆಚ್ಚು ಚರ್ಚಿಸಲ್ಪಡುತ್ತವೆ. ಜನವರಿಯಲ್ಲಿ ಸಭೆ ನಡೆದ ಬಳಿಕ ಸಭೆ ನಡೆಯದೆ ಆರು ತಿಂಗಳು ಕಳೆದಿದೆ. ದಲಿತರ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡದೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಹೀಗಾದರೆ ಅಭಿವೃದ್ಧಿ ಸಾಧ್ಯವಾಗುವುದಾದರೂ ಹೇಗೆ? ತಹಶೀಲ್ದಾರ್ ಅಥವಾ ಸಹಾಯಕ ಕಮಿಷನರ್ ಅನುಪಸ್ಥಿತಿಯಲ್ಲಿ ಸಭೆ ನಡೆಸಲು ಬಿಡುವುದಿಲ್ಲ ಎಂದು ಮುಖಂಡ ರಾದ ಗಿರಿಧರ ನಾಯ್ಕ, ಬಾಲಚಂದ್ರ ಸೊರಕೆ, ಸೇಸಪ್ಪ ನೆಕ್ಕಿಲ ಮೊದಲಾದವರು ಎಚ್ಚರಿಸಿದರು.
Related Articles
ಗಿರಿಧರ್ ಮಾತನಾಡಿ, ನಾನು ಸುಳ್ಯದ ಸಭೆಗೂ ಹೋಗುತ್ತೇನೆ. ಅಲ್ಲಿನ ತಹಶೀಲ್ದಾರ್ ಉತ್ತಮ ಸ್ಪಂದನೆ ನೀಡು ತ್ತಾರೆ. ಆದರೆ ಪುತ್ತೂರಿನಲ್ಲಿ ದಲಿತರಿಗೆ ಸಂಬಂಧಿಸಿದ ಮೂಲ ಸೌಕರ್ಯಗಳನ್ನೇ ಮಾಡಿಕೊಡುತ್ತಿಲ್ಲ. ತಾಲೂಕು ಆಫೀಸ್‌ಗೆ ತೆರಳಿದರೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಸಹಾಯಕ ಕಮಿಷನರ್ ಆದರೂ ಬರಬೇಕು. ನಮಗೆ ಸಮಸ್ಯೆಗಳನ್ನು ಹೇಳಿಕೊಳ್ಳಲು ಇದೆ ಎಂದವರು ಹೇಳಿದರು.
Advertisement
ಸಭೆ ಬರ್ಖಾಸ್ತುಅನಂತರ ತಾ.ಪಂ. ಧಿಕಾರಿ ಜಗದೀಶ್ ಎಸ್. ಮಾತನಾಡಿ, ಈ ಸಭೆಯ ಅಧ್ಯಕ್ಷರು ತಹಶೀಲ್ದಾರ್ ಅವರೇ ಆಗಿರುತ್ತಾರೆ. ಸಭೆ ಇಂದು ಬೇಡ ಎಂದಾದರೆ ಮುಂದಿನ ದಿನವನ್ನು ನಿಗದಿ ಮಾಡೋಣ ಎಂದು ಹೇಳಿದರು. ಬಳಿಕ ಸಭೆಯನ್ನು ಬರ್ಖಾಸ್ತುಗೊಳಿಸಲಾಯಿತು. ಮುಂದಿನ ಸಭೆಯ ದಿನಾಂಕವನ್ನು ತಿಳಿಸುವುದಾಗಿ ಇಒ ಹೇಳಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್., ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ ಸಿ.ಎಚ್., ಉಪ ತಹಶೀಲ್ದಾರ್ ರಾಮಣ್ಣ ನಾಯ್ಕ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡರು.