Advertisement

ಅಲ್‌ಖೈದಾದೊಂದಿಗೆ ವಿಲೀನಗೊಳ್ಳುತ್ತಂತೆ ತೆಹ್ರೀಕ್‌ ತಾಲಿಬಾನ್‌!

09:13 PM Jul 29, 2023 | Team Udayavani |

ಕಾಬೂಲ್‌: ದಕ್ಷಿಣ ಏಷ್ಯಾದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಭಯೋತ್ಪಾದನಾ ಗುಂಪುಗಳನ್ನು ಒಂದುಗೂಡಿಸಿ, ಒಂದು ಸಂಘಟನೆಯನ್ನು ರೂಪಿಸುವ ನಿಟ್ಟಿನಲ್ಲಿ ಅಲ್‌ಖೈದಾದೊಂದಿಗೆ ವಿಲೀನಗೊಳ್ಳಲು ತೆಹ್ರೀಕ್‌-ಇ-ತಾಲಿಬಾನ್‌ ಪಾಕಿಸ್ತಾನ್‌(ಟಿಟಿಪಿ) ಮುಂದಾಗಿದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಸಲ್ಲಿಸಲಾಗಿರುವ ವರದಿಯಲ್ಲಿ ತಿಳಿಸಲಾಗಿದೆ. ವರದಿಯ ಪ್ರಕಾರ, ಪಾಕಿಸ್ತಾನದೊಳಗೆ ಹೆಚ್ಚಿನ ದಾಳಿಗಳನ್ನು ನಡೆಸಲು ಟಿಟಿಪಿಗೆ ಅಲ್‌ಖೈದಾ ಮಾರ್ಗದರ್ಶನಗಳನ್ನು ನೀಡುತ್ತಿದೆ. ಟಿಟಿಪಿ ಮತ್ತು ಅಲಖೈದಾ ವಿಲೀನ ಸಾಧ್ಯತೆ ಹೆಚ್ಚಿದೆ.

Advertisement

ಅಫ್ಘಾನಿಸ್ತಾನವನ್ನು ತಾಲಿಬಾನ್‌ ಸ್ವಾಧೀನಪಡಿಸಿಕೊಂಡ ನಂತರ ಪಾಕಿಸ್ತಾನದಲ್ಲಿ ನಿಷೇಧಿತ ಭಯೋತ್ಪಾದನಾ ಸಂಘಟನೆ ಟಿಟಿಪಿ, ದೊಡ್ಡ ಪ್ರಭಾವ ಹೊಂದಿದೆ. ಅಫ್ಘಾನಿಸ್ತಾನದ ಕುನಾರ್‌ ಪ್ರಾಂತ್ಯದಲ್ಲಿ ವಿವಿಧ ಭಯೋತ್ಪಾದನಾ ಸಂಘಟನೆಗಳು ತರಬೇತಿ ಶಿಬಿರಗಳನ್ನು ಹೊಂದಿವೆ. ಈ ಶಿಬಿರಗಳನ್ನು ಟಿಟಿಪಿ ಉಗ್ರರು ಬಳಸುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಈ ವರದಿಯನ್ನು ತಾಲಿಬಾನ್‌ ವಕ್ತಾರ ಜಬಿಹುಲ್ಲಾ ಮುಜಾಹಿದ್‌ ತಳ್ಳಿಹಾಕಿದ್ದಾರೆ.

“ಅಲೈಖೈದಾದೊಂದಿಗೆ ಇಸ್ಲಾಮಿಕ್‌ ಎಮಿರೇಟ್‌ ಆಫ್ ಅಫ್ಘಾನಿಸ್ತಾನ ಸಂಬಂಧ ಹೊಂದಿದೆ ಎಂಬ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವರದಿ ಸುಳ್ಳು. ಅಫ್ಘಾನಿಸ್ತಾನದಲ್ಲಿ ಅಲೆಖೈದಾ ಉಪಸ್ಥಿತಿ ಇಲ್ಲ. ಬೇರೆ ದೇಶದ ಭದ್ರತೆಯ ವಿರುದ್ಧ ಅಫ್ಘಾನಿಸ್ತಾನದ ನೆಲವನ್ನು ಯಾರೂ ಕೂಡ ಬಳಸಲು ಇಸ್ಲಾಮಿಕ್‌ ಎಮಿರೇಟ್‌ ಬಿಡುವುದಿಲ್ಲ” ಎಂದು ಮುಜಾಹಿದ್‌ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next