Advertisement

ಜಮ್ಮು ಕಾಶ್ಮೀರ: ಕಾಲುವೆಗೆ ಹಾರಿ ಬಾಲಕಿ, ಪ್ರಿಯಕರ ಆತ್ಮಹತ್ಯೆ

05:45 PM Jul 30, 2018 | udayavani editorial |

ಜಮ್ಮು : ಅಪ್ರಾಪ್ತ ವಯಸ್ಸಿನ ಹುಡುಗಿ ತನ್ನ 21ರ ಹರೆಯದ ಬಾಯ್‌ ಫ್ರೆಂಡ್‌ ಜತೆಗೆ ಜಮ್ಮು ಕಾಶ್ಮೀರದ ಉಧಾಂಪುರ ಜಿಲ್ಲೆಯ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ತಮ್ಮ ಪ್ರೇಮ ಪ್ರಕರಣಕ್ಕೆ ಮನೆಯವರ ಸಮ್ಮತಿ ಇರಲಾರದೆಂಬ ಶಂಕೆಯಲ್ಲಿ ಈ ಜೋಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

Advertisement

ಎಂಟನೇ ತರಗತಿಯ ವಿದ್ಯಾರ್ಥಿನಿ ಮತ್ತು ಆಕೆಯ 21ರ ಹರೆಯದ ಬಾಯ್‌ ಫ್ರೆಂಡ್‌ ಧರಂ ಸಿಂಗ್‌ ಎಂಬಾತನ ಮೃತ ದೇಹವನ್ನು  ಚಿನಾನಿ ಹೈಡ್ರೋ ಎಲೆಕ್ಟ್ರಿಕ್‌ ಪ್ರಾಜೆಕ್ಟ್ ನ ಕಾಲುವೆಯಿಂದ ಮೇಲಕ್ಕೆತ್ತಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ತನ್ನ ಮಗಳನ್ನು ಧರಂ ಸಿಂಗ್‌ ಅಪಹರಿಸಿದ್ದಾನೆ ಎಂದು ಬಾಲಕಿಯ ತಂದೆ ಪೊಲೀಸರಿಗೆ ಕಳೆದ ಶನಿವಾರ ದೂರು ಕೊಟ್ಟ ಬಳಿಕವೇ ಈ ದುರ್ಘ‌ಟನೆ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next