Advertisement
ಹೆಬ್ರಿ ಮೂಲದ ಕಾಳ್ ಶೆಟ್ಟಿ ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಆತ್ಮಹತ್ಯೆಗೆ ಮುಂದಾಗಿದ್ದರು. ಗಮನಿಸಿದ ಸ್ಥಳೀಯ ಯುವಕರಾದ ಪ್ರಮೋದ್ ಪೂಜಾರಿ ಮತ್ತು ತಂಡ ಅವರನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಡಿವೈಎಸ್ಪಿ ಗಜಾನನ ವಾಮನ ಸುತಾರ ರವರು ವೃದ್ಧರಾದ ಕಾಳ್ ಶೆಟ್ಟಿ ಅವರನ್ನು ಜೆಸಿ ಆಸ್ಪತ್ರೆಗೆ ದಾಖಲಿಸಿ ಹೆಬ್ರಿಯ ಅವರ ವಿಳಾಸ ತಿಳಿದು ವೃದ್ಧರನ್ನು ಕರೆದುಕೊಂಡು ಹೋಗಲುಸಂಬಂಧಿಕರಿಗೆ ತಿಳಿಸಿದ್ದಾರೆ. ತೀರ್ಥಹಳ್ಳಿ ಪೊಲೀಸರ ದೂರವಾಣಿ ಸಂಖ್ಯೆ 0881-228333 ಸಂಪರ್ಕಿಸಲು ಕೋರಲಾಗಿದೆ.