Advertisement

15ರ ಹರೆಯದ ಬಾಲಕಿಯ ಅಪಹರಣ, ಸಾಮೂಹಿಕ ಅತ್ಯಾಚಾರ

09:47 AM Feb 14, 2019 | udayavani editorial |

ಬಂದಾ, ಉತ್ತರ ಪ್ರದೇಶ : ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಾಲ್ವರು ಕಾಮಾಂಧರು ಹದಿಹರೆಯದ ಬಾಲಕಿಯನ್ನು  ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ಪೊಲೀಸರು ಇಂದು ಗುರುವಾರ ತಿಳಿಸಿದ್ದಾರೆ.

Advertisement

ಮಹೋಬಾ ಜಿಲ್ಲೆಯ ಪನವಾಡಿ ಗ್ರಾಮದಲ್ಲಿ  ನಿನ್ನೆ ಸಂಜೆ 15ರ ಹರೆಯದ ಬಾಲಕಿಯು ಹೊಲದಿಂದ ಮನೆಗೆ ಮರಳುತ್ತಿದ್ದ ವೇಳೆ ಆಕೆಯನ್ನು ಅಪಹರಿಸಿ ಹೊಲದಲ್ಲೇ ಆಕೆಯ ಮೇಲೆ ಅತ್ಯಾಚಾರ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

ಬಾಲಕಿಯು ಮನೆಗೆ ತಲುಪಿದೊಡನೆಯೇ ನಡೆದ ಘಟನೆಯನ್ನು ಹೇಳಿದಾಕ್ಷಣ ಆಕೆಯ ಹೆತ್ತವರು ಪೊಲೀಸರಿಗೆ ದೂರು ನೀಡಿದರು.

ಎಫ್ಐಆರ್‌ ನಲ್ಲಿ ಆರೋಪಿಗಳಾಗಿ ಪುಷ್ಪೇಂದ್ರ ರಾಜಪೂತ್‌, ಅಂಕಿತ್‌, ಕೇಶ್‌ ಕುಮಾರ್‌ ಮತ್ತು ಕೋನಿಯಾ ಎಂಬವರನ್ನು ಹೆಸರಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸುವ ಯತ್ನ ನಡೆದಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next