ಬೆಂಗಳೂರು: ನಸುಕಿನಲ್ಲಿ ನಗರಕ್ಕೆ ಬರುವ ಹಾಲಿನ ಕ್ರೇಟ್‌ಗಳನ್ನೆ ಕಳ್ಳತನ ಮಾಡುವ ಗ್ಯಾಂಗ್‌ವೊಂದು ನಗರದಲ್ಲಿ ಸಕ್ರಿಯವಾಗಿದ್ದು, ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯ ಕಲ್ಲಸಂದ್ರದಲ್ಲಿ ಕಳ್ಳರು ಹಾಲಿನ ಪ್ಯಾಕೆಟ್‌ಗಳ ತುಂಬಿರುವ ಕ್ರೇಟ್‌ಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಕಲ್ಲಸಂದ್ರದಲ್ಲಿ ದಿಲೀಪ್ ಎಂಬುವರ ಅಂಗಡಿಯಲ್ಲಿ ಕ್ರೇಟ್‌ಗಟ್ಟಲೇ ಹಾಲು ಕಳ್ಳತನ ಮಾಡುತ್ತಿರುವ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕನಕಪುರ ರಸ್ತೆಯ ಕಲ್ಲಸಂದ್ರದಲ್ಲಿ ಹಲವು ವರ್ಷಗಳಿಂದ ದಿಲೀಪ್ ಹಾಲಿನ ಮಾರಾಟ ಮಾಡುತ್ತಿದ್ದಾರೆ. ಬೆಳಗಿನ ಜಾವ ಹಾಲಿನ ಬೂತ್‌ಗಳಿಗೆ ಸರಬರಾಜು ಆಗುವ ಕ್ರೇಟ್‌ನಲ್ಲಿ ಹಾಲನ್ನು ಅನ್‌ಲೋಡ್ ಮಾಡಲಾಗುತ್ತದೆ. ಲಾರಿಯಲ್ಲಿ ಹಾಲಿನ ಪ್ಯಾಕೆಟ್‌ಗಳು ತುಂಬಿರುವ ಕ್ರೇಟ್‌ಗಳನ್ನು ತಂದು ಮುಂಜಾನೆ 3 ಗಂಟೆ ಸುಮಾರಿಗೆ ಅಂಗಡಿ ಮುಂದೆ ಇಳಿಸಲಾಗುತ್ತದೆ.
ಇನ್ನು ಹಾಲಿನ ಬೂತ್ ಮಾಲಿಕರು ತಡವಾಗಿ ಬಂದು ನಂತರ ವ್ಯಾಪಾರ ಆರಂಭಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಬೆಳ್ಳಂ ಬೆಳಗ್ಗೆ ಹಾಲು ಕದಿಯೋದನ್ನೇ ರೂಢಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ದಿಲೀಪ್ ಅವರ ಹಾಲಿನ ಬೂತ್‌ಗೆ ಬಂದು ಕೈ ಚಳಕ ತೋರಿದ್ದಾರೆ.
ದ್ವಿಚಕ್ರವಾಹನದಲ್ಲಿ ಬಂದ ಮೂವರು ಯುವಕರು ಕ್ರೇಟ್ ಗಟ್ಟಲೆ ಹಾಲನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಇದೇ ರೀತಿ ಸುಬ್ರಹ್ಮಣ್ಯಪುರದ ಹಲವು ಹಾಲಿನ ಬೂತ್‌ನಲ್ಲಿ ಕೈಚಳಕ ತೋರಿರುವುದು ಕಂಡು ಬಂದಿದೆ.
ಹಾಲಿನ ಕ್ರೇಟ್‌ಗಳು ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ಬಂದಿದ್ದು, ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ಹೋಗಿ ಪರಿಶೀಲಿಸಿದ್ದಾರೆ. ಆದರೆ ಇದುವರೆಗೂ ಯಾರು ದೂರು ನೀಡಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.