Advertisement

Technical problem; ಇಂಡಿಗೋ ಬುಕಿಂಗ್‌, ಚೆಕ್‌ಇನ್‌ನಲ್ಲಿ ವಿಳಂಬ

01:51 AM Oct 07, 2024 | Team Udayavani |

ಹೊಸದಿಲ್ಲಿ: ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋದಲ್ಲಿ ಶನಿವಾರ ಭಾರೀ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಇಂಟರ್‌ನೆಟ್‌ ಆಧಾರಿತ ಸೇವೆಗಳಾಗಿರುವ ಟಿಕೆಟ್‌ ಬುಕಿಂಗ್‌, ಚೆಕ್‌ಇನ್‌ ಸೇರಿದಂತೆ ಹಲವು ಸೇವೆಗಳು ವ್ಯತ್ಯಯ ಗೊಂಡವು. ಇದರಿಂದಾಗಿ 2,000 ಅಧಿಕ ವಿಮಾನಗಳ ಹಾರಾಟದಲ್ಲಿ ವಿಳಂಬ ಉಂಟಾಗಿತ್ತು. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ವಿಮಾನ  ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಬೋರ್ಡಿಂಗ್‌ ಪಾಸ್‌ಗಳನ್ನು ಕೈನಲ್ಲಿ ಬರೆದು ಕೊಡ ಲಾಯಿತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ವಿಮಾನ ಯಾನ ಸಂಸ್ಥೆ “ನಮ್ಮ ಸಿಸ್ಟಮ್‌ಗಳಲ್ಲಿ ತಾತ್ಕಾಲಿಕ ಸಮಸ್ಯೆಗಳು ಎದುರಾಗಿದ್ದು, ನಮ್ಮ ಜಾಲತಾಣ ಮತ್ತು ಬುಕಿಂಗ್‌ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ’ ಎಂದು ಹೇಳಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next