Advertisement
ಯುನೆಸ್ಕೋ ಪ್ರಕಾರ, ವಿಶ್ವಾದ್ಯಂತ ಒಂಬತ್ತು ಜನರಲ್ಲಿ ಒಬ್ಬರು ಕುಡಿಯಲು ಯೋಗ್ಯವಲ್ಲದ ನೀರನ್ನು ಬಳಸುತ್ತಾರೆ ಮತ್ತು 2.4 ಬಿಲಿಯನ್ ಜನರು ಯಾವುದೇ ರೀತಿಯ ಶುದ್ಧ ನೀರಿನ ಹಂಗೇ ಇಲ್ಲದೆ ವಾಸಿಸುವ ಅನಿವಾರ್ಯದಲ್ಲಿದ್ದಾರೆ.
ನೀರಿನ ಗುಣಮಟ್ಟ ಸುಧಾರಿಸುವ ಸಲುವಾಗಿ, ಭಾರತದ ಪ್ರಮುಖ ಸಲಹಾ ಕಂಪೆನಿ ಕ್ಯಾಪ್ಜೆಮಿನಿ ತನ್ನ ಟೆಕ್ ಚಾಲೆಂಜ್ 2019 ಅನ್ನು ಪ್ರಾರಂಭಿಸಿತು. ಮುಕ್ತ ಸ್ಪರ್ಧೆಯ 6ನೇ ಆವೃತ್ತಿಯಲ್ಲಿ ನೀರಿನ ಗುಣಮಟ್ಟವನ್ನು ಸುಧಾರಿಸಲು ಉದಯೋನ್ಮುಖ ಡಿಜಿಟಲ್ ತಂತ್ರಜ್ಞಾನಗಳೊಂದಿಗೆ ಕೆಲಸ ಮಾಡಲು ಸವಾಲು ಹಾಕಿತು.
Related Articles
ಅನಂತರ ಫೈನಲಿಸ್ಟ್‌ಗಳನ್ನು 10 ತಂಡಗಳಾಗಿ ವಿಂಗಡಿಸಿ ಅಂತಿಮ ಟೆಕ್ ಸವಾಲನ್ನು ಎದುರಿಸಲು ಕರೆ ನೀಡಲಾಯಿತು. ಇಲ್ಲಿ ದಕ್ಷ ನೀರಿನ ನಿರ್ವಹಣೆ ಮತ್ತು ಸಂರಕ್ಷಣೆ ಪ್ರಮುಖ ವಿಷಯವಾಗಿತ್ತು.
Advertisement
ಈ ಸ್ಪರ್ಧೆಯಲ್ಲಿ ಪರಿಣಾಮಕಾರಿಯಾದ ನೀರಿನ ಸಂರಕ್ಷಣೆಗಾಗಿ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಟೀಮ್ ಟೆಕ್ಲೈಟ್ಸ್ ವಿಜೇತರಾದರು. ನೀರಿನ ಗುಣಮಟ್ಟ ಸುಧಾರಣೆಯಲ್ಲಿ ಹೊಸ-ಯುಗದ ಡಿಜಿಟಲ್ ತಂತ್ರಜ್ಞಾನಗಳಾದ ಕೌಡ್ ಅನ್ನು ಬಳಸಿಕೊಂಡಿತು. ನೀರಿನ ಬಳಕೆಯನ್ನು ಟ್ರ್ಯಾಕ್ ಮಾಡಿ ನೀರಿನ ಸೋರಿಕೆಯನ್ನು ತಡೆಯುವ ಕಾರ್ಯ ಮಾಡಲಾಯಿತು. ದೇಶೀಯ, ವಾಣಿಜ್ಯ ಮತ್ತು ಕೈಗಾರಿಕಾ ಬಳಕೆಯಲ್ಲಿ ನೀರಿನ ಸಂಸ್ಕರಣೆಯನ್ನು ಸಕ್ರಿಯಗೊಳಿಸಿ ನೀರಿನ ಮರು ಬಳಕೆಗೆ ಅನುವು ಮಾಡಲಾಯಿತು.
“ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸಿಕೊಂಡು ಸವಾಲುಗಳನ್ನು ಪರಿಹರಿಸಲು ಯುವ ಪ್ರೋಗ್ರಾಂಗಳು ಮತ್ತು ಟೆಕ್ ಉತ್ಸಾಹಿಗಳನ್ನು ಗುರುತಿಸಲು ವಿನ್ಯಾಸಗೊಳಿಸಲಾದ ಟೆಕ್ ಚಾಲೆಂಜ್ ಈಗ ಉದ್ಯಮದಲ್ಲಿ ಯುವ ಮತ್ತು ಅದ್ಭುತ ಮನಸ್ಸುಗಳನ್ನು ತೊಡಗಿಸಿಕೊಳ್ಳಲು ಒಂದು ಅನನ್ಯ ವೇದಿಕೆಯಾಗಿದೆ. ಎಂಥದ್ದೇ ಸಮಸ್ಯೆಗಳಿಗೆ ಸ್ಥಿರವಾಗಿ ಪರಿಹಾರಗಳನ್ನು ಕಂಡುಹಿಡಿಯಲು ಸಾಧ್ಯವಾಗಿದೆ’ ಎಂದು ಭಾರತದ ಕ್ಯಾಪೆjಮಿನಿಯ ಸಿಒಒ ಅರುಲ್ ಕುಮಾರನ್ ಪರಮಾನಂದಂ ಹೇಳಿದರು.
ಕಾಣೆಯಾಗುತ್ತಿರುವ ಮಕ್ಕಳ ಪತ್ತೆಗೂ ಸ್ಪರ್ಧೆ2017ರ ಆವೃತ್ತಿಯಲ್ಲಿ, ವಿಜೇತರು ಭಾರತದಲ್ಲಿ ಕಾಣೆಯಾದ ಮಕ್ಕಳ ಸಮಸ್ಯೆಯನ್ನು ಪರಿಹರಿಸಲು ಮೂಲಮಾದರಿಯ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದರು. ಈ ಅಪ್ಲಿಕೇಶನ್ ಅನ್ನು ಅನಂತರ ಆಂಡ್ರಾಯ್ಡ್ ನಲ್ಲಿ ಲಭ್ಯವಿರುವ ನೈಜ ಅಪ್ಲಿಕೇಶನ್‌ನ ರಿ ಯುನಿಟ್ ಆಗಿ ಪರಿವರ್ತಿಸಲಾಯಿತು. ಇಂತಹ ಸ್ಪರ್ಧೆಗಳಿಂದ ಅದ್ಭುತ ವಿಚಾರಗಳು ಮುನ್ನೆಲೆಗೆ ಬರಲು ಮಾತ್ರವಲ್ಲ, ಹೊಸ ಪ್ರತಿಭೆಗಳನ್ನು ಹುಡುಕುವ ಸಂಸ್ಥೆಗಳ ಗಮನಕ್ಕೆ ತಮ್ಮ ಕೌಶಲಗಳನ್ನು ಪ್ರದರ್ಶಿಸುವ ವೇದಿಕೆಯಾಗಿಯೂ ಯುವ ತಂತ್ರಜ್ಞರಿಗೆ ನೆರವಾಗುತ್ತದೆ.