Advertisement

ಬಿಜೆಪಿಯಿಂದ ಅವಳಿ ರಣತಂತ್ರ, ಇಬ್ಬಗೆಯ ಪ್ರಚಾರಕ್ಕೆ ಟೀಂ ರೆಡಿ

11:52 AM Sep 23, 2017 | Team Udayavani |

ಬೆಂಗಳೂರು : ಚುನಾವಣೆ ಹೊಸ್ತಿಲಲ್ಲಿ  ಮಿಷನ್‌ 150 ಗುರಿಯೊಂದಿಗೆ ಮತ್ತೆ ಅಧಿಕಾರ ಹಿಡಿಯಲು ಭಾರೀ ತಂತ್ರಗಳನ್ನು ಹಣೆಯುತ್ತಿರುವ ಬಿಜೆಪಿ 2 ಮಾದರಿಯಲ್ಲಿ ಪ್ರಚಾರ ಸಮಿತಿಗಳನ್ನು ರಚಿಸಿದೆ.  ಪಕ್ಷವನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಪ್ರಚಾರ ಸಮಿತಿಗಳನ್ನು  ರಚಿಸಿ ಭರ್ಜರಿ ಪ್ರಚಾರ ನಡೆಸಲು ಮುಂದಾಗಿದ್ದಾರೆ. 

Advertisement

30 ಸದಸ್ಯರ ತಂಡಗಳಲ್ಲಿ  ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಸಾಂಪ್ರದಾಯಿಕ ಪ್ರಚಾರ ಸಮಿತಿ ಯ ಅಧ್ಯಕ್ಷರಾದರೆ, ಅಸಾಂಪ್ರದಾಯಿಕ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಸಂಸದ ಪ್ರಹ್ಲಾದ್‌ ಜೋಷಿ ಅವರನ್ನು ನೇಮಿಸಲಾಗಿದೆ.  

ಕೇಂದ್ರ ಸಚಿವ ಅನಂತ್‌ಕುಮಾರ್‌ ಹೆಗಡೆ, ಸಂಸದರಾದ ಪ್ರತಾಪ್‌ ಸಿಂಹ, ಭಗವಂತ್‌ ಖೂಬಾ, ಎಸ್‌ಎಂ ಕೃಷ್ಣ, ಶಾಸಕ ಸುರೇಶ್‌ ಕುಮಾರ್‌ ,ಭಾರತಿ ಶೆಟ್ಟಿ  ಸೇರಿ 30 ಜನ ಮುಖಂಡರ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. 

ಸಾಂಪ್ರದಾಯಿಕ ಸಮಿತಿ ಎಂದಿನಂತೆ ಸಮಾವೇಶಗಳು, ಸಭೆಗಳಲ್ಲಿ ಪ್ರಚಾರ ನಡೆಸಿದರೆ, ಅಸಾಂಪ್ರದಾಯಿಕ  ಪ್ರಚಾರ ಸಮಿತಿ ಸಾಮಾಜಿಕ ತಾಣಗಳ ಮೂಲಕ ಪ್ರಚಾರ ನಡೆಸಲಿದೆ ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next