Advertisement

Team India; ತಂಡಕ್ಕೆ ಆಯ್ಕೆಯಾಗುವ ಮೊದಲು ಗಂಭೀರ್ ಬಗ್ಗೆ ಸ್ಪಷ್ಟ ಸಂದೇಶ ನೀಡಿದ ವಿರಾಟ್

05:17 PM Jul 19, 2024 | Team Udayavani |

ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಅವರು ಭಾರತೀಯ ತಂಡದ ಕೋಚ್ ಆಗಿ ಕಾರ್ಯ ಆರಂಭಿಸಿದ್ದಾರೆ. ಈ ತಿಂಗಳಾಂತ್ಯಕ್ಕೆ ಆರಂಭವಾಗಲಿರುವ ಶ್ರೀಲಂಕಾ ಪ್ರವಾಸದಿಂದ ಗಂಭೀರ್ ಕೋಚ್ ಅಧಿಕಾರವಧಿ ಆರಂಭವಾಗಲಿದೆ.

Advertisement

ಲಂಕಾ ಪ್ರವಾಸದ ಟಿ20 ಮತ್ತು ಏಕದಿನ ಸರಣಿಗೆ ಬಿಸಿಸಿಐ (BCCI) ಗುರುವಾರ ತಂಡವನ್ನು ಪ್ರಕಟಿಸಿದೆ. ತಂಡದ ಆಯ್ಕೆಯಲ್ಲಿ ಗಂಭೀರ್ ಪ್ರಭಾವ ಸ್ಪಷ್ಟವಾಗಿ ಕಾಣುತ್ತದೆ. ಲಂಕಾ ಸರಣಿಯಿಂದ ವಿಶ್ರಾಂತಿ ಬಯಸಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡಾ ಕೊನೆಯ ಕ್ಷಣದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ದೆಹಲಿ ಆಟಗಾರರಾದ ವಿರಾಟ್ ಮತ್ತು ಗೌತಮ್ ಗಂಭೀರ್ ನಡುವೆ ಮೈದಾನದಲ್ಲಿ ಹಲವು ಬಾರಿ ಗಲಾಟೆಗಳು ನಡೆದಿದೆ. 2023ರ ಐಪಿಎಲ್ ನಲ್ಲಿ ಗಂಭೀರ್ ಮತ್ತು ವಿರಾಟ್ ಜಗಳವಾಡಿಕೊಂಡಿದ್ದರು. ತಮ್ಮ ಅಗ್ರೆಶನ್ ನಿಂದಲೇ ಹೆಸರಾದ ಇಬ್ಬರು ಆಟಗಾರರು ಒಂದೇ ತಂಡದಲ್ಲಿ ಆಡುತ್ತಿದ್ದಾರೆ.

ಶ್ರೀಲಂಕಾ ವಿರುದ್ಧದ ಭಾರತದ ಏಕದಿನ ತಂಡದ ಭಾಗವಾಗಲು ವಿರಾಟ್ ಕೊಹ್ಲಿ ಸಹ ಒಪ್ಪಿಗೆ ನೀಡುವುದರೊಂದಿಗೆ, ಅವರು ಗಂಭೀರ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ.

Advertisement

ಈ ಪರಿಸ್ಥಿತಿಯ ನಡುವೆ, ಈ ಹಿಂದಿನ ಗಂಭೀರ್ ಅವರೊಂದಿಗಿನ ಭಿನ್ನಾಭಿಪ್ರಾಯಗಳು ಭಾರತ ತಂಡದೊಳಗಿನ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೊಹ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಭರವಸೆ ನೀಡಿದ್ದಾರೆ ಎಂದು ಕ್ರಿಕ್‌ಬಜ್‌ ವರದಿ ದೃಢಪಡಿಸಿದೆ. ಇಬ್ಬರೂ ಸಾಮಾನ್ಯ ಗುರಿಯತ್ತ ಕೆಲಸ ಮಾಡುವುದರಿಂದ ಮಂಡಳಿಯು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆಂದು ವರದಿ ತಿಳಿಸಿದೆ.

2023ರ ರ ಐಪಿಎಲ್ ನಲ್ಲಿ ಗಂಭೀರ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದರು. ಈ ವೇಳೆ ಪಂದ್ಯವೊಂದರಲ್ಲಿ ವಿರಾಟ್ ಕೊಹ್ಲಿ ಜತೆ ಗಂಭೀರ್ ಮೈದಾನದಲ್ಲಿ ಗಲಾಟೆ ಮಾಡಿಕೊಂಡಿದ್ದರು. 2024ರ ಐಪಿಎಲ್ ನಲ್ಲಿ ಇಬ್ಬರೂ ತಬ್ಬಿಕೊಂಡು ಒಂದಾಗಿದ್ದರು.

ಕೆಲವು ತಿಂಗಳ ಹಿಂದೆ ಗೌತಿ ಕೂಡಾ ವಿರಾಟ್ ಬಗ್ಗೆ ಮಾತನಾಡಿದ್ದರು. “ನೈಜತೆಗಿಂತ ಗ್ರಹಿಕೆಗಳು ತುಂಬಾ ದೂರದಲ್ಲಿದೆ. ವಿರಾಟ್ ಕೊಹ್ಲಿ ಜತೆಗಿನ ನನ್ನ ಸಂಬಂಧವನ್ನು ತಿಳಿಯಲು ಈ ದೇಶ ಬಯಸುವುದಿಲ್ಲ. ತನ್ನನ್ನು ತಾನು ವ್ಯಕ್ತಪಡಿಸಲು ಮತ್ತು ನಮ್ಮ ಆಯಾ ತಂಡಗಳನ್ನು ಗೆಲ್ಲಲು ಸಹಾಯ ಮಾಡಲು ನನ್ನಂತೆಯೇ ಅವನಿಗೆ ಹಕ್ಕಿದೆ. ಸಾರ್ವಜನಿಕರಿಗೆ ಮಸಾಲಾ ಕೊಡಲು ನಮ್ಮ ಸಂಬಂಧವಿಲ್ಲ ಎಂದು ಗಂಭೀರ್ ಹೇಳಿದ್ದರು.

ನವೀನ್-ಉಲ್-ಹಕ್ ಮತ್ತು ಗೌತಮ್ ಗಂಭೀರ್ ಅವರನ್ನು ಅಪ್ಪಿಕೊಂಡ ನಂತರ ಜನರು ತಮ್ಮಲ್ಲಿ ನಿರಾಶೆಗೊಂಡಿದ್ದಾರೆ ಎಂದು ವಿರಾಟ್ ಕೂಡ ಒಪ್ಪಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next