Advertisement

ದಕ್ಷಿಣ ಆಫ್ರಿಕಾ ಪ್ರವಾಸ: ಕ್ವಾರಂಟೈನ್‌ನಲ್ಲಿ ಟೀಮ್‌ ಇಂಡಿಯಾ

10:55 PM Dec 12, 2021 | Team Udayavani |

ಮುಂಬಯಿ: ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತೀಯ ಕ್ರಿಕೆಟ್‌ ತಂಡದ ಸದಸ್ಯರು 3 ದಿನಗಳ ಕ್ವಾರಂಟೈನ್‌ಗೆ ಒಳಗಾದರು.

Advertisement

ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಫೈವ್‌ಸ್ಟಾರ್‌ ಹೊಟೇಲ್‌ ಒಂದರಲ್ಲಿ ಇವರಿಗೆ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ.

ಬುಧವಾರ ಚಾರ್ಟರ್‌ ವಿಮಾನವೊಂದರಲ್ಲಿ ಭಾರತ ತಂಡ ಜೊಹಾನ್ಸ್‌ಬರ್ಗ್‌ಗೆ ತೆರಳಲಿದೆ.

ಭಾರತ “ಎ’ ತಂಡದೊಂದಿಗೆ ಈಗಾಗಲೇ ದಕ್ಷಿಣ ಆಫ್ರಿಕಾಕ್ಕೆ ಹೋಗಿರುವ, ಸೀನಿಯರ್‌ ತಂಡದ ಭಾಗವಾಗಿರುವವರೆಲ್ಲ ಅಲ್ಲಿಯೇ ಉಳಿದುಕೊಂಡು ತಂಡವನ್ನು ಸೇರಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಮೂವರು ವೆಸ್ಟ್‌ ಇಂಡೀಸ್‌ ಕ್ರಿಕೆಟಿಗರಿಗೆ ಕೋವಿಡ್‌

Advertisement

ಟೆಸ್ಟ್‌ ತಂಡಕ್ಕೆ ಮರಳಿರುವ ಹನುಮ ವಿಹಾರಿ ಇವರಲ್ಲಿ ಪ್ರಮುಖರು.

Advertisement

Udayavani is now on Telegram. Click here to join our channel and stay updated with the latest news.

Next