ಈ ಬಾರಿ ತಂಡದ ಎಲ್ಲ ಆಟಗಾರರೂ ಅಭ್ಯಾಸದಲ್ಲಿ ಪಾಲ್ಗೊಂಡರು. ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಆಡುತ್ತಿದ್ದ ಸರ್ಫರಾಜ್ ಖಾನ್ ಕೂಡ ಇದ್ದರು.
Advertisement
ಬಾಂಗ್ಲಾದೇಶದ ಸ್ಲೋ ಬೌಲಿಂಗ್ ಆಕ್ರಮಣ ವನ್ನು ಗಮನದಲ್ಲಿರಿಸಿಕೊಂಡು, ನಾಯಕ ರೋಹಿತ್ ಶರ್ಮ ಸ್ಪಿನ್ ಎಸೆತಗಳನ್ನು ಹೆಚ್ಚೆಚ್ಚು ನಿಭಾಯಿಸಿದರು. ಅಭ್ಯಾಸಕ್ಕಾಗಿ ರಚಿಸಲಾದ ಈ ಪಿಚ್ ಸಾಕಷ್ಟು ಬೌನ್ಸಿಯಾಗಿತ್ತು.ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್ ಬಹಳಷ್ಟು ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಇಬ್ಬರೂ ಜಸ್‌ಪ್ರೀತ್ ಬುಮ್ರಾ ಮತ್ತು ಆರ್. ಅಶ್ವಿನ್ ಎಸೆತಗಳನ್ನು ಎದುರಿಸಿದರು.