Advertisement
ರೋಹಿತ್, ಶುಭಮನ್ ಗಿಲ್, ನಾಯಕ ರಹಾನೆ ಅವರೆಲ್ಲ ಹೆಚ್ಚಿನ ಅವಧಿಯನ್ನು ನೆಟ್ಸ್ ನಲ್ಲಿ ಕಳೆದರು. ಚೈನಾಮನ್ ಬೌಲರ್ ಕುಲದೀಪ್ ಯಾದವ್ ಕೂಡ ಸುದೀರ್ಘ ಅಭ್ಯಾಸ ನಡೆಸಿದರು. ಸೀಮರ್ ಶಾರ್ದೂಲ್ ಠಾಕೂರ್, ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಗಮನ ಸೆಳೆದರು.
Related Articles
Advertisement
ಕಠಿನ ಕ್ವಾರಂಟೈನ್
ಇದಕ್ಕೂ ಮುನ್ನ ಟೀಮ್ ಇಂಡಿಯಾ ಸದಸ್ಯರು ಬ್ರಿಸ್ಬೇನ್ ಹೊಟೇಲ್‌ನಲ್ಲಿ ಕಠಿನ ಕ್ವಾರಂಟೈನ್‌ಗೆ ಒಳಗಾಗಿದ್ದರು. ಪಕ್ಕದ ಹೊಟೇಲಿನಲ್ಲಿ “ಬ್ರಿಟನ್ ಕೊರೊನಾ’ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತದ ಕ್ರಿಕೆಟಿಗರಿಗೆ ರೂಮ್ ಸಿಬಂದಿಯನ್ನೂ ನೀಡಿರಲಿಲ್ಲ. ಇದಕ್ಕೆ ತಂಡದ ಆಡಳಿತ ಮಂಡಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಆದರೆ ಬುಧವಾರ ಈ ಸಮಸ್ಯೆ ಪರಿಹಾರ ಕಂಡಿತು. ಜಿಮ್, ಸ್ವಿಮ್ಮಿಂಗ್ ಪೂಲ್‌ಗಳೂ ಭಾರತದ ಕ್ರಿಕೆಟಿಗರಿಗೆ ತೆರೆಯಲ್ಪಟ್ಟವು