Advertisement

Asian Games; ಪಂದ್ಯ ರದ್ದಾದರೂ ಸೆಮಿ ಫೈನಲ್ ಪ್ರವೇಶ ಪಡೆದ ಭಾರತದ ವನಿತಾ ತಂಡ

12:21 PM Sep 21, 2023 | Team Udayavani |

ಹಾಂಗ್ ಝೂ: ಏಷ್ಯನ್ ಗೇಮ್ಸ್ ಕೂಟದ ಮೊದಲ ಕ್ರಿಕೆಟ್ ಪಂದ್ಯವು ರದ್ದಾದರೂ ಭಾರತದ ವನಿತಾ ತಂಡವು ಸೆಮಿ ಫೈನಲ್ ಪ್ರವೇಶಿಸಿದೆ. ಇಂದು ಮಲೇಷ್ಯಾ ವನಿತೆಯರ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯವು ಮಳೆಯ ಕಾರಣದಿಂದ ರದ್ದಾಗಿದೆ.

Advertisement

ಪಿಂಗ್ ಫೆಂಗ್ ಕ್ಯಾಂಪಸ್ ಗ್ರೌಂಡ್ ನಲ್ಲಿ ನಡೆದ ಪಂದ್ಯವು ಮಳೆಯ ಕಾರಣದಿಂದ 15 ಓವರ್ ಗೆ ಇಳಿಸಲ್ಪಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಎರಡು ವಿಕೆಟ್ ನಷ್ಟಕ್ಕೆ 173 ರನ್ ಮಾಡಿತು. ಆದರೆ ಮಲೇಷ್ಯಾ ವನಿತಾ ತಂಡದ ಬ್ಯಾಟಿಂಗ್ ವೇಳೆ ಕೇವಲ ಎರಡು ಎಸೆತ ಆಗುಷ್ಟರಲ್ಲಿ ಮಳೆ ಅಡ್ಡಪಡಿಸಿತು. ನಂತರ ಮಳೆ ನಿಲ್ಲದ ಕಾರಣ ರದ್ದು ಮಾಡಲಾಯಿತು.

ಭಾರತದ ಪರ ನಾಯಕಿ ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಮೊದಲು ವಿಕೆಟ್ ಗೆ 57 ರನ್ ಜೊತೆಯಾಟವಾಡಿದರು. ಮಂಧನಾ 27 ರನ್ ಗೆ ಔಟಾದರೆ, ಶಫಾಲಿ ಅರ್ಧಶತಕ ಬಾರಿಸಿದರು. ಈ ಮೂಲಕ ಏಷ್ಯನ್ ಗೇಮ್ಸ್ ನಲ್ಲಿ ಅರ್ಧಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಸಾಧನೆ ಮಾಡಿದರು. ಶಫಾಲಿ 39 ಎಸೆತದಲ್ಲಿ 67 ರನ್ ಮಾಡಿ ಔಟಾದರೆ, ಜೆಮಿಮಾ ರೋಡ್ರಿಗಸ್ 29 ಎಸೆಗಳಲ್ಲಿ ಅಜೇಯ 47 ರನ್ ಬಾರಿಸಿದರು. ರಿಚಾ ಘೋಷ್ ಏಳು ಎಸೆತಗಳಲ್ಲಿ ಅಜೇಯ 21 ರನ್ ಬಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next