Advertisement
ಕಳೆದ ಐಸಿಸಿ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬಳಿಕ ಪೂಜಾರ ತೀವ್ರ ಟೀಕೆಗೆ ಒಳಗಾಗಿದ್ದರು. ಇಂಗ್ಲಿಷ್ ಕೌಂಟಿಯಲ್ಲಿ ರನ್ ಪ್ರವಾಹ ಹರಿಸಿದರೂ ಓವಲ್‌ನಲ್ಲಿ ನಡೆದ ಫೈನಲ್‌ನಲ್ಲಿ ಪೂಜಾರ ಕೈಕೊಟ್ಟಿದ್ದರು. ಭಾರತದ ಸೋಲಿಗೆ ಪೂಜಾರ ಅವರ ವೈಫಲ್ಯವೂ ಒಂದು ಕಾರಣವಾಗಿತ್ತು.
“ಮಾನಸಿಕವಾಗಿ ಚೇತೇಶ್ವರ್ ಬಹಳ ಬಲಿಷ್ಠವಾಗಿದ್ದಾನೆ. ಆಯ್ಕೆ ಕುರಿತಂತೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವನೀಗ ದುಲೀಪ್ ಟ್ರೋಫಿ ಪಂದ್ಯಾವಳಿಗಾಗಿ ಅಭ್ಯಾಸ ನಡೆಸುತ್ತಿದ್ದಾನೆ. ಅವನೇಕೆ ಟೀಮ್ ಇಂಡಿಯಾಕ್ಕೆ ಮರಳಬಾರದು… ಆತನ ತಂದೆ ಹಾಗೂ ಕೋಚ್ ಆಗಿ ನಾನು ಈ ಪ್ರಶ್ನೆಯನ್ನು ಕೇಳಬಯಸುತ್ತೇನೆ’ ಎಂಬುದಾಗಿ ಅರವಿಂದ್ ಪೂಜಾರ ಮಾಧ್ಯಮದವರಲ್ಲಿ ಹೇಳಿದರು.