ವಿಶಾಖಪಟ್ಟಣ: ಆಸೀಸ್ ವೇಗಿಗಳ ದಾಳಿಗೆ ನಲುಗಿದ ಟೀಂ ಇಂಡಿಯಾ ಬ್ಯಾಟರ್ ಗಳು ವಿಶಾಖಪಟ್ಟಣದಲ್ಲಿ ರನ್ ಗಳಿಸಲು ಪರದಾಡಿದ್ದಾರೆ. ಸ್ಟಾರ್ಕ್- ಅಬೋಟ್- ಎಲ್ಲಿಸ್ ವೇಗಕ್ಕೆ ಸಿಲುಕಿದ ಟೀಂ ಇಂಡಿಯಾ ಕೇವಲ 26 ಓವರ್ ನಲ್ಲಿ 117 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.
ವಿಶಾಖಪಟ್ಟದ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿತು. ನಾಯಕನ ಈ ನಿರ್ಧಾರವನ್ನು ಸಮರ್ಥಿಸಿದ ಬೌಲರ್ ಗಳು ಆರಂಭದಿಂದಲೇ ವಿಕೆಟ್ ಪಡೆಯಲಾರಂಭಿಸಿದರು.
ಮೊದಲ ಓವರ್ ನಲ್ಲೇ ಗಿಲ್ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ನಾಯಕ ರೋಹಿತ್ ಕೂಡಾ 13 ರನ್ ಗೆ ವಿಕೆಟ್ ಒಪ್ಪಿಸಿದರು. ಸೂರ್ಯಕುಮಾರ್ ಮತ್ತೊಂದು ಗೋಲ್ಡಕ್ ಡಕ್ ಗೆ ಔಟಾದರು. ರಾಹುಲ್ 9 ರನ್ ಮತ್ತು ಪಾಂಡ್ಯ 1 ರನ್ ಗೆ ಔಟಾದರು.
ಇದನ್ನೂ ಓದಿ:ಚುನಾವಣೆ ಕೆಲಸಕ್ಕೆ ನಿರ್ಲಕ್ಷ್ಯ: ಬೀದರ್ ನಲ್ಲಿ ಇಬ್ಬರು ಅಧಿಕಾರಿಗಳ ಅಮಾನತು
ಅಲ್ಪ ಪ್ರತಿರೋಧ ತೋರಿದ ವಿರಾಟ್ ಕೊಹ್ಲಿ 31 ರನ್ ಮಾಡಿದರೆ, ಅಕ್ಷರ್ ಪಟೇಲ್ ಅಜೇಯ 29 ರನ್ ಗಳಿಸಿದರು. ರವೀಂದ್ರ ಜಡೇಜಾ 16 ರನ್ ಮಾಡಿದರು.
ಆಸೀಸ್ ಪರ ಘಾತಕ ದಾಳಿ ಸಂಘಟಿಸಿದ ಮಿಚೆಲ್ ಸ್ಟಾರ್ಕ್ ಐದು ವಿಕೆಟ್ ಪಡೆದರು. ಸೀನ್ ಅಬೋಟ್ ಮೂರು ಮತ್ತು ನಥನ್ ಎಲ್ಲಿಸ್ ಎರಡು ವಿಕೆಟ್ ಪಡೆದರು.