Advertisement

ಬೋಧಕರಿಗೆ ನಿರಂತರ ಅಧ್ಯಯನ ಅಗತ್ಯ

02:03 PM Mar 27, 2021 | Team Udayavani |

ಕೋಲಾರ: ಉಪನ್ಯಾಸಕರು ನಿರಂತರ ಅಧ್ಯಯನ ದಿಂದ ಮಾತ್ರ ಉತ್ತಮ ಬೋಧಕರಾಗಲು ಸಾಧ್ಯ. ಈ ನಿಟ್ಟಿನಲ್ಲಿ ತರಬೇತಿಯ ಪ್ರಯೋಜನ ಪಡೆದುಕೊಂಡುವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯ ಜವಾಬ್ದಾರಿ ನಿರ್ವಹಿಸಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಮ್ಮಪ್ಪ ಹೇಳಿದರು.

Advertisement

ತಾಲೂಕಿನ ಬೆಳ್ಳೂರಿನ ರಮಾಮಣಿ ಸುಂದರರಾಜ ಅಯ್ನಾಂಗಾರ್‌ ಪದವಿ ಪೂರ್ವ ಕಾಲೇಜಿನಲ್ಲಿಕೃಷ್ಣಮಾಚಾರ್‌ ಮತ್ತು ಶೇಷಮ್ಮ ಸ್ಮಾರಕನಿಧಿ ಟ್ರಸ್ಟ್‌ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಯುಕ್ತಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪದವಿಪೂರ್ವ ಉಪನ್ಯಾಸಕರ ಕಾರ್ಯಾಗಾರಕ್ಕೆ ಚಾಲನೆನೀಡಿ ಮಾತನಾಡಿ, ಕೋವಿಡ್‌ ಸಂಕಷ್ಟದ ಸ್ಥಿತಿಯಲ್ಲಿಉಪನ್ಯಾಸಕರು ಆರೋಗ್ಯ ಮತ್ತು ಶೈಕ್ಷಣಿಕ ಪ್ರಗತಿಎರಡು ದೃಷ್ಟಿಕೋನದಿಂದ ಮಕ್ಕಳಿಗೆ ಬೋಧನೆ, ಮಾರ್ಗದರ್ಶನ ನೀಡಬೇಕಾಗಿದೆ ಎಂದರು.

ಮಾರ್ಗದರ್ಶನ ಪಡೆದುಕೊಳ್ಳಿ: ಶೇ.30ರಷ್ಟು ಪಠ್ಯ ಕಡಿತಗೊಳಿಸಲಾಗಿದೆ. ಉಳಿದ ಪಠ್ಯದಲ್ಲಿ 100ಅಂಕಗಳ ಪ್ರಶ್ನೆಪತ್ರಿಕೆ ಸಿದ್ಧಗೊಳಿಸುವ ಕುರಿತುಸಂಪನ್ಮೂಲ ವ್ಯಕ್ತಿಗಳಿಂದ ಅಗತ್ಯ ಮಾರ್ಗದರ್ಶನಪಡೆದುಕೊಳ್ಳಬೇಕು. ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಉತ್ತಮ ಸಾಧನೆ ಮಾಡಲು ಉಪನ್ಯಾಸಕರ ಜವಾಬ್ದಾರಿ ಹೆಚ್ಚಿದೆ. ವಿದ್ಯಾರ್ಥಿಗಳಿಗೆ ಸಂಸ್ಕಾರ, ರಾಷ್ಟ್ರೀಯಭಾವನೆಯನ್ನು ಜತೆಗೆ ಬೆಳೆಸುವ ಹೊಣೆಗಾರಿಕೆಯೂನಿಮ್ಮಮೇಲಿದ್ದು, ತರಬೇತಿ ಪಡೆದು ಕಾಲೇಜುಗಳಲ್ಲಿ ಮಕ್ಕಳಿಗಾಗಿ ಬಳಸಿಕೊಳ್ಳಿ ಎಂದರು.

ಜ್ಞಾನದ ಹಸಿವಿಗೆ ಆಹಾರ ನೀಡಿ: ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಾಸ್ತಿ ಕಾಲೇಜುಪ್ರಾಂಶುಪಾಲ ರಾಮಚಂದ್ರಪ್ಪ ಮಾತನಾಡಿ, ಕಲಿಕೆಮತ್ತು ಕಲಿಸುವಿಕೆ ಎರಡೂ ಇದ್ದಾಗ ಮಾತ್ರ ಓರ್ವಶಿಕ್ಷಕ ಪರಿಪೂರ್ಣನಾಗಲು ಸಾಧ್ಯ. ಮಕ್ಕಳ ಜ್ಞಾನದಹಸಿವಿಗೆ ಆಹಾರ ನೀಡುವ ಶಕ್ತಿ ನೀವು ತರಬೇತಿಯಿಂದ ಪಡೆದುಕೊಳ್ಳಿ ಎಂದು ಹೇಳಿದರು.ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಕೃಷ್ಣಪ್ಪ ಮಾತನಾಡಿ, ಉಪನ್ಯಾಸಕರಲ್ಲಿ ಕಾಲಕ್ಕೆ ತಕ್ಕಂತೆಕಲಿಕೆಯ ಕೌಶಲ್ಯ ಕ್ಷೀಣಿಸದಂತೆ ಪುನಶ್ಚೇತನ ಕಾರ್ಯಾಗಾರ ಅಗತ್ಯವಿದೆ. ಗೊಂದಲವಿಲ್ಲದ ಸ್ವಷ್ಟ ಜ್ಞಾನನಿಮ್ಮದಾಗಿದ್ದರೆ, ವಿದ್ಯಾರ್ಥಿಗಳ ಆಸಕ್ತಿಯನ್ನು ನಿಮ್ಮಡೆ ಸೆಳೆದುಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಶಿಕ್ಷಣ ಸಂಸ್ಥೆಗಳು ಬಿಸಿನೆಸ್‌ ಕೇಂದ್ರಗಳಲ್ಲ:ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷ್ಣಮಾಚಾರ್‌ಮತ್ತು ಶೇಷಮ್ಮ ಸ್ಮಾರಕ ನಿಧಿ ಟ್ರಸ್ಟ್‌ ವ್ಯವಸ್ಥಾಪಕ ಟ್ರಸ್ಟಿಬಿ.ರಘು ಮಾತನಾಡಿ, ಶಿಕ್ಷಣ ಸಂಸ್ಥೆಗಳೆಂದರೆ ಬಿಸಿನೆಸ್‌ ಕೇಂದ್ರಗಳಲ್ಲ. ಕೇವಲ 100 ಅಂಕಗಳಿಕೆಯ ಶಿಕ್ಷಣಬೇಡ, ಜತೆಗೆ ಸಂಸ್ಕಾರ ಕಲಿಸುವ ಶಿಕ್ಷಣ, ಮಕ್ಕಳನ್ನು ಈ ದೇಶದ ಆಸ್ತಿಯಾಗಿಸುವ ಶಿಕ್ಷಣ ಬೇಕು ಎಂದರು. ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಸಲು ಸಲಹೆ ನೀಡಿದ ಅವರು, ಗುರುಜಿ ಬಿಕೆಎಸ್‌ ಅಯ್ಯಂಗಾರ್‌ ಅವರು,ಗ್ರಾಮೀಣ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಗುರಿಯೊಂದಿಗೆ ಈ ಸಂಸ್ಥೆ ತೆರೆದರು ಎಂದು ತಿಳಿಸಿದರು.

Advertisement

ಗುರೂಜಿಯವರ ವಿಶ್ವದಾದ್ಯಂತ ಇರುವಯೋಗ ಶಿಷ್ಯರು ಇಂದು ಈ ಸಂಸ್ಥೆಗೆ ನೆರವಾಗಿದ್ದಾರೆ.ಆದ್ದರಿಂದ ಉಚಿತ ಶಿಕ್ಷಣ ನೀಡುತ್ತಿದ್ದೇವೆ. ಉಚಿತಆಸ್ಪತ್ರೆ, ಪ್ರೌಢಶಾಲೆ ತೆರೆಯಲಾಗಿದೆ ಎಂದು ಸಂಸ್ಥೆಯ ಸಾಮಾಜಿಕ ಕಾಳಜಿ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಸ್ವಾಗತಿಸಿದ ಸಂಸ್ಥೆಯ ಪ್ರಾಂಶುಪಾಲೆ ಪ್ರೊ.ಛಾಯಾದೇವಿ, ಉಪನ್ಯಾಸಕರಿಗೆ ಕಲಿಸುವಷ್ಟೇ ಕಲಿಯೋದು ಸಹಾ ಅತಿ ಮುಖ್ಯವಾಗಿದೆ.ನಾವು ನಿರಂತರವಾಗಿ ವಿದ್ಯಾರ್ಥಿಗಳಾದರೆ ಮಾತ್ರಉತ್ತಮ ಬೋಧಕರಾಗಲು ಸಾಧ್ಯ ಎಂದರು. ಎರಡೂದಿನಗಳ ಕಾರ್ಯಾಗಾರದಲ್ಲಿ ವ್ಯವಹಾರ ಅಧ್ಯಯನ,ಗಣಿತ, ಮಾ.27ರಂದು ಅರ್ಥಶಾಸ್ತ್ರ ಉಪನ್ಯಾಸಕರಿಗೆತರಬೇತಿ ನಡೆಯುತ್ತಿದೆ. ಸಂಪನ್ಮೂಲ ವ್ಯಕ್ತಿಗಳಾಗಿಪ್ರೊ.ಜಗದೀಶ್‌, ರಾಜು, ರಮೇಶ್‌, ಬಾಲರಾಜ್‌ಕಾರ್ಯನಿರ್ವಹಿಸಿದರು. ಕೆ.ಬಿ.ಲಕ್ಷ್ಮೀ, ಶ್ವೇತಾ ನಿರೂಪಿಸಿ, ಅಸ್ಮಿತಾ ಪ್ರಾರ್ಥಿಸಿ, ಉಪನ್ಯಾಸಕ ಮನೋಹರ್‌ ವಂದಿಸಿದ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲೆಯ ವಿವಿಧ ಕಾಲೇಜುಗಳ ಉಪನ್ಯಾಸಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next