Advertisement

ಶಿಕ್ಷಕರ ಸಾಮೂಹಿಕವರ್ಗಾವಣೆಗೆಪಟ್ಟು

12:07 PM Mar 14, 2019 | |

ತಾಳಿಕೋಟೆ: ಕರ್ತವ್ಯ ಪಾಲನೆ ಮಾಡುವಲ್ಲಿ ನಿರ್ಲಕ್ಷ ತೋರುತ್ತಿರುವ ದೇವರ ಹುಲಗಬಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಲು ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಆಗ್ರಹಿಸಿದ್ದಾರೆ.

Advertisement

ಗ್ರಾಮದ ಶಾಲೆಯಲ್ಲಿ ಇಂಗಳಗೇರಿ ಕ್ಲಸ್ಟರ್‌ ಮಟ್ಟದ ಮುಖ್ಯಗುರುಗಳ ಸಭೆ ಕರೆಯಲಾಗಿತ್ತು. ವಿಷಯ ತಿಳಿದ ಗ್ರಾಮಸ್ಥರು, ಯುವಕರು ಶಾಲೆಗೆ ಆಗಮಿಸಿ ಸಿಆರ್‌ಸಿ ಜಿ.ಆರ್‌. ಸೋನಾರ ಅವರಿಗೆ ಲಿಖೀತ ಮನವಿ ಸಲ್ಲಿಸಿದರು.

ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಹ ಶಿಕ್ಷಕಿ ಎಂ.ಜಿ. ವಾಲಿ ಹಾಗೂ ಇನ್ನುಳಿದ ಶಿಕ್ಷಕಿಯರು ಮಕ್ಕಳಿಗೆ ಸರಿಯಾಗಿ ಪಾಠ ಮಾಡದೇ ಶಾಲೆ ಹೊರಗಡೆ ಹರಟೆ ಹೊಡಯುತ್ತ ಕೂಡುತ್ತಾರೆ. ಮಧ್ಯಾಹ್ನ ಊಟ ಮಾಡಿ ತರಗತಿ ಕೋಣೆಯಲ್ಲಿಯೇ ನಿದ್ರೆ ಮಾಡುತ್ತಾರೆ. ಮೊಬೈಲ್‌ನಲ್ಲಿ ಕಾಲಹರಣ ಮಾಡುತ್ತಾರೆ. ಈ ಕುರಿತು ತಿಳಿಹೇಳಲು ಹೋದರೆ ಬೇಕಾಬಿಟ್ಟಿಯಾಗಿ ವರ್ತಿಸುತ್ತಾರೆ ಎಂದು ಮನವಿಯಲ್ಲಿ ದೂರಲಾಗಿದೆ.

ಗ್ರಾಮಸ್ಥರ ಸಭೆ: ಶಿಕ್ಷಣ ಇಲಾಖೆ ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ಆರ್‌. ಸೋನಾರ ನಡೆಸಿದ ಗ್ರಾಮಸ್ಥರ ಸಭೆಯಲ್ಲಿ ಗ್ರಾಮಸ್ಥರು ಹೆಚ್ಚಾಗಿ ಇನ್ನುಳಿದ ಶಿಕ್ಷಕಿಯರ ಮೇಲೆ ಬೆರಳು ಮಾಡದೇ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಎಂ.ಜಿ. ವಾಲಿ ಮೇಲೆ ದೂರಿನ ಸುರಿಮಳೆಗೈಯ್ದರು. ಮುಖ್ಯಗುರುಗಳು ಇಲ್ಲಿ ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ಅವರ ಮಾತು ಯಾರು ಕೇಳುವುದಿಲ್ಲ. ಶಾಲೆಯಲ್ಲಿ ಒಟ್ಟು 1-8ನೇ ತರಗತಿವರೆಗೆ ವರ್ಗಗಳಿದ್ದು 122 ವಿದ್ಯಾರ್ಥಿಗಳಿದ್ದಾರೆ. ಒಟ್ಟು ಆರು ಜನ ಶಿಕ್ಷಕರಿದ್ದು ಅದರಲ್ಲಿ ಮುಖ್ಯ ಶಿಕ್ಷಕರು ಪುರುಷರಾಗಿದ್ದರೆ ಐವರು ಶಿಕ್ಷಕಿಯರಿದ್ದಾರೆ.

ಮುಖ್ಯಗುರು ಎ.ವಿ. ಕುಲಕರ್ಣಿ ಶಿಕ್ಷಕಿಯರಿಗೆ ವಿರುದ್ಧ ಮಾತನಾಡದೇ ಮೌನವಾಗಿರುವುದೇ ಉತ್ತಮ ಎಂಬಂತೆ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕಿ ಎಂ.ಜಿ. ವಾಲಿ ಅವರಂತೂ ಮುಖ್ಯಶಿಕ್ಷಕರಿಂದಲೇ ತಮ್ಮ ವರ್ಗ ಕೋಣೆಗೆ ಚಾಕ್‌ಪೀಸ್‌ ತರಿಸಿಕೊಳ್ಳುತ್ತಾರೆ. ಪ್ರಾರ್ಥನೆ ಸಮಯದಲ್ಲಿ ಇರುವುದಿಲ್ಲ. ಇವರಿಗೆ ಯಾರೂ ಏನು ಕೇಳುವವರು ಹೇಳುವರು ಯಾರು ಇಲ್ಲವಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
 
ಗ್ರಾಪಂ ಸದಸ್ಯ ನಿಂಗನಗೌಡ ಪಾಟೀಲ, ಗ್ರಾಮಸ್ಥರಾದ ಎಂ.ಎಚ್‌. ನಾವದಗಿ, ನಾಗನಗೌಡ ಪಾಟೀಲ, ಆರ್‌.ಜಿ. ಹಿರೇಮಠ, ಎಂ.ಎನ್‌. ಇನಾಮದಾರ, ಮಹ್ಮದ್‌ರಫಿಕ್‌ ಇನಾಮದಾರ, ಎಚ್‌.ಎಂ. ಚಲವಾದಿ, ಶಿವಪುತ್ರಪ್ಪ ಚಲವಾದಿ, ಮಹಾದೇವಿ ಹಿರೇಮಠ, ಭಾಷಾಸಾಬ ಮಾಗಿ, ಅಲ್ಲಾಪಟೇಲ್‌ ಬಿರಾದಾರ, ಹುಸೇನಪಟೇಲ್‌ ಬಿರಾದಾರ, ಭೀಮಣ್ಣ ಚಲವಾದಿ, ಯಾಸೀನ್‌ ಹಾದಿಮನಿ, ಮಾರುತಿ ಮಾದರ, ರೆಹಮಾನ್‌ ಸಾಬ ತಾಳಿಕೋಟಿ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next