Advertisement

ಟಿಸಿಎಸ್‌ ಸಿಇಓ ನಟರಾಜನ್‌ ಚಂದ್ರಶೇಖರನ್‌ ಟಾಟಾ ಸನ್ಸ್‌ ಹೊಸ ಅಧ್ಯಕ್ಷ

07:28 PM Jan 12, 2017 | |

ಹೊಸದಿಲ್ಲಿ : ಟಿಸಿಎಸ್‌ ಸಿಇಓ ನಟರಾಜನ್‌ ಚಂದ್ರಶೇಖರನ್‌ ಅವರನ್ನು  ಟಾಟಾ ಸನ್ಸ್‌ ನ ಹೊಸ ಅಧ್ಯಕ್ಷರನ್ನಾಗಿ ಕಂಪೆನಿಯು ಇಂದು ಗುರುವಾರ ನೇಮಿಸಿದೆ. ಇವರು ಈಗಿನ ತಾತ್ಕಾಲಿಕ ಅಧ್ಯಕ್ಷ ರತನ್‌ ಟಾಟಾ ಹಾಗೂ ಪದಚ್ಯುತ ಸೈರಸ್‌ ಮಿಸ್ತ್ರಿ  ಅವರ ಉತ್ತರಾಧಿಕಾರಿಯಾಗಿರುತ್ತಾರೆ.

Advertisement

ರತನ್‌ ಟಾಟಾ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಟಾಟಾ ಸನ್ಸ್‌ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.  

ಟಾಟಾ ಸನ್ಸ್‌ ಅಧ್ಯಕ್ಷ ಸ್ಥಾನಕ್ಕೆ ಪೆಪ್ಸಿಕೋ ಮುಖ್ಯಸ್ಥೆ ಇಂದ್ರಾ ನೂಯಿ, ವೋಡಾಫೋನ್‌ ಸಮೂಹದ ಮಾಜಿ ಮುಖ್ಯಸ್ಥ ಅರುಣ್‌ ಸಾರಿನ್‌, ಟಾಟಾ ರಿಟೇಲ್‌ ಯೂನಿಟ್‌ ಟ್ರೆಂಟ್‌ನ ಅಧ್ಯಕ್ಷ ನವಲ್‌ ಟಾಟಾ ಮೊದಲಾದ ಹೈ ಪ್ರೊಫೈಲ್  ಹೆಸರುಗಳು ಪರಿಶೀಲನೆಯಲ್ಲಿದ್ದವು. ಅಂತಿಮವಾಗಿ ಟಿಸಿಎಸ್‌ ಸಿಇಓ ನಟರಾಜನ್‌ ಚಂದ್ರಶೇಖರನ್‌ ಅವರನ್ನು ಸಭೆಯಲ್ಲಿ ಆಯ್ಕೆಮಾಡಲಾಯಿತು ಎಂದು ಕಂಪೆನಿ ಮೂಲಗಳು ತಿಳಿಸಿವೆ. 

ಟಾಟಾ ಸನ್ಸ್‌ ಕಂಪೆನಿಯ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರನ್‌ ಅವರ ನೇಮಕಾತಿಯು ಹೊಸ ಅಧ್ಯಕ್ಷರನ್ನು ಶೋಧಿಸುವ ಐವರು ಸದಸ್ಯರ ಸಮಿತಿಗೆ ನೀಡಲಾಗಿದ್ದ ಫೆ.24ರ ಗಡುವಿಗೆ ಒಂದು ತಿಂಗಳ ಮೊದಲೇ ನಡೆದಿರುವುದು ಗಮನಾರ್ಹವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next