Advertisement

ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಸೋತವರಿಗೂ ‘ಅಲ್ಟ್ರಾಜ್‌ ಕಾರು ಉಡುಗೊರೆ ಘೋಷಿಸಿದ ಟಾಟಾ

03:46 PM Aug 13, 2021 | Team Udayavani |

ನವದೆಹಲಿ : ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಕಳೆದುಕೊಂಡ ಭಾರತೀಯ ಟಾಪ್ ಆಟಗಾರರಿಗೆ ಟಾಟಾ ಕಂಪನಿ ಬಂಪರ್ ಉಡುಗೊರೆ ಘೋಷಿಸಿದೆ.

Advertisement

ಇತ್ತೀಚಿಗೆ ಜಪಾನ್ ನಲ್ಲಿ ನಡೆದ ಟೋಕಿಯೋ 2020 ಒಲಿಂಪಿಕ್ಸ್ ನಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚು ಗೆದ್ದ ಭಾರತೀಯ ಆಟಗಾರರಿಗೆ ಸರ್ಕಾರ ಹಾಗೂ ಹಲವು ಸಂಸ್ಥಗಳು ಭರ್ಜರಿ ಉಡುಗೊರೆ ನೀಡಿದವು. ಜಾವೆಲಿನ್ ಥ್ರೋ ಪಟು ನೀರಜ್ ಜೋಪ್ರಾ ಅವರಿಗೆ ಮಹೀಂದ್ರಾ ಕಂಪನಿಯು ದುಬಾರಿ ಬೆಲೆಯ ಎಸ್ ಯುವಿ ಕಾರು ಗಿಫ್ಟ್ ಘೋಷಿಸಿತ್ತು. ಇದೀಗ ಟಾಟಾ ಕಂಪನಿಯೂ ಕೂಡ ಭಾರತೀಯ ಆಟಗಾರರಿಗೆ ಉಡುಗೊರೆ ನೀಡಲು ಮುಂದೆ ಬಂದಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ, ಕೊನೆಯ ಕ್ಷಣದಲ್ಲಿ ಕಂಚು ಪದಕ ಗೆಲ್ಲಲು ವಿಫಲಗೊಂಡ ಆಟಗಾರರಿಗೆ ಟಾಟಾ ‘ಅಲ್ಟ್ರಾಜ್‌; ಕಾರು ಉಡುಗೊರೆ ನೀಡುವುದಾಗಿ ಪ್ರಕಟಿಸಿದೆ.

ಈ ಬಗ್ಗೆ ಮಾತನಾಡಿರುವ ಟಾಟಾ ಮೋಟಾರ್ಸ್ ನ ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್ ನ ಅಧ್ಯಕ್ಷ ಶೈಲೇಶ್ ಚಂದ್ರ, ಈ ಒಲಿಂಪಿಕ್ ಭಾರತಕ್ಕೆ ಪದಕಗಳಿಗಿಂತ ಹೆಚ್ಚಿನದು ಆಗಿದೆ. ನಮ್ಮ ಆಟಗಾರರ ಶ್ರಮ ಹಾಗೂ ಚೈತನ್ಯ ನಾವು ಸಂಭ್ರಮಿಸಬೇಕು. ಒತ್ತಡದ ನಡುವೆಯೂ ಅದ್ಭುತವಾಗಿ ಪ್ರದರ್ಶನ ನೀಡಿದ ಕ್ರೀಡಾಪಟುಗಳನ್ನು ನಾವು ಮೆಚ್ಚಲೇಬೇಕು. ಈ ಆಟಗಾರರು ಪದಕ ಗೆಲ್ಲುವಲ್ಲಿ ಸೋತಿರಬಹುದು, ಆದರೆ ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದ್ದಾರೆ. ಅವರ ತ್ಯಾಗ ಹಾಗೂ ಪರಿಶ್ರಮ ಭಾರತೀಯ ಉದಯೋನ್ಮುಖ ಯುವ ಆಟಗಾರರಿಗೆ ಖಂಡಿತವಾಗಿಯೂ ಸ್ಫೂರ್ತಿ ಆಗಿದೆ. ಇವರನ್ನು ನಾವು ಗೌರವಿಸಿ ಅಭಿನಂದಿಸಬೇಕು. ಈ ನಿಟ್ಟಿನಲ್ಲಿ ಗೋಲ್ಡನ್ ಕಲರ್ ನ ‘ಅಲ್ಟ್ರಾಜ್‌’ ಕಾರು ಉಡುಗೊರೆ ರೂಪದಲ್ಲಿ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Advertisement

ಇನ್ನು ‘ಅಲ್ಟ್ರಾಜ್‌’ ಕಾರು ಕಳೆದ ವರ್ಷ ಮಾರುಕಟ್ಟೆಗೆ ಪರಿಚಯವಾಗಿದೆ. ಈ ಕಾರು ಸೆಫ್ಟಿಯಲ್ಲಿ 5 ಸ್ಟಾರ್ ಪಡೆದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next