ನವದೆಹಲಿ: ಭಾರತದ ಪ್ರಮುಖ B2B ಡಿಜಿಟಲ್ ಮತ್ತು ಕ್ಲೌಡ್ ಸೊಲ್ಯೂಷನ್ಸ್ ಪೂರೈಕೆದಾರರಲ್ಲಿ ಒಂದಾದ ಟಾಟಾ ಟೆಲಿ ಬ್ಯುಸಿನೆಸ್ ಸರ್ವೀಸಸ್ (ಟಿಟಿಬಿಎಸ್), ಪ್ರಮುಖ ಜಾಗತಿಕ ಕಮ್ಯುನಿಕೇಷನ್ ಸಂಸ್ಥೆಯಾದ ಟ್ರೂಕಾಲರ್ ಜತೆ ಜಂಟಿಯಾಗಿ ಕಾರ್ಯನಿರ್ವಹಿಸುವುದಾಗಿ ಗುರುವಾರ (ನವೆಂಬರ್ 30) ಘೋಷಿಸಿದೆ.
ಇದನ್ನೂ ಓದಿ:Kollywood: 18 ವರ್ಷದ ಬಳಿಕ ಒಂದೇ ದಿನ ರಜಿನಿಕಾಂತ್ – ಕಮಲ್ ಹಾಸನ್ ಸಿನಿಮಾ ರಿಲೀಸ್
ಈ ಸಹಯೋಗದಿಂದ ಟಿಟಿಬಿಎಸ್ ಎಂಟರ್ ಪ್ರೈಸ್ ಗ್ರಾಹಕರಿಗೆ ವಿನೂತನವಾದ “ವೆರಿಫೈಡ್ ಬ್ಯುಸಿನೆಸ್ ಕಾಲರ್ ಐಡಿ ಸೊಲ್ಯೂಷನ್: ಅನ್ನು ಪರಿಚಯಿಸಲಿದೆ. ಇದರಿಂದಾಗಿ ಪರಿಣಾಮಕಾರಿ ಸಂವಹನದಲ್ಲಿ ಐಡೆಂಟಿಟಿ, ವಿಶ್ವಾಸಾರ್ಹತೆ ಮತ್ತು ಸ್ಪ್ಯಾಮ್ ಕರೆಗಳನ್ನು ತಡೆಗಟ್ಟಬಹುದಾಗಿದೆ ಎಂದು ವರದಿ ತಿಳಿಸಿದೆ.
Truecaller ನ ವೆರಿಫೈಡ್ ಬ್ಯುಸಿನೆಸ್ ಕಾಲರ್ ಐಡಿ ಸೊಲ್ಯೂಷನ್ ಮೂಲಕ ಮೊಬೈಲ್ ಬಳಕೆದಾರರು ಪರಿಶೀಲಿಸಿದ ಬ್ಯುಸಿನೆಸ್ ಕರೆಗಳನ್ನು ತ್ವರಿತವಾಗಿ ಗುರುತಿಸಲು ಮತ್ತು ಬ್ರ್ಯಾಂಡ್, ಲೋಗೋವನ್ನು ನಿಖರವಾಗಿ ಪ್ರದರ್ಶಿಸಲ್ಪಡುತ್ತದೆ.
ಈ ವೆರಿಫೈಡ್ ಐಡೆಂಟಿಟಿಯಿಂದ ಗ್ರಾಹಕರು ವಿಶ್ವಾಸದಿಂದ ಕರೆಯನ್ನು ಸ್ವೀಕರಿಸಲು ಮತ್ತು ಕಾನೂನುಬದ್ಧ ಕರೆಗಳನ್ನು ಸುಲಭವಾಗಿ ಗುರುತಿಸಲು ಸಹಾಯವಾಗಲಿದೆ. ಅಲ್ಲದೇ ವಿಡಿಯೋ ಕಾಲರ್ ಐಡಿ, ಕಾಲ್ ಫೀಡ್ ಬ್ಯಾಕ್ ಹಾಗೂ ಇತರ ನೂತನ ಆಫರ್ ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಟಾಟಾ ಟೆಲಿ ಬ್ಯುಸಿನೆಸ್ ಸರ್ವಿಸ್ ತಿಳಿಸಿದೆ.
ಟ್ರೂಕಾಲರ್ ನಲ್ಲಿ ನಾವು ಆಧುನಿಕ ವಹಿವಾಟಿನ ಸ್ವರೂಪದ ನಂಬಿಕೆ ಮತ್ತು ದೃಢೀಕರಣದ ಮಹತ್ವವನ್ನು ಅರ್ಥ ಮಾಡಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ನಾವು ಟ್ರೂಕಾಲರ್ ಜತೆ ಜಂಟಿಯಾಗಿ ಕಾರ್ಯನಿರ್ವಹಿಸುವ ಮೂಲಕ ಲಕ್ಷಾಂತರ ಗ್ರಾಹಕರ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಟ್ರೂಕಾಲರ್ ನ ಗ್ಲೋಬಲ್ ಹೆಡ್ ಪ್ರಿಯಂ ಬೋಸ್ ತಿಳಿಸಿದ್ದಾರೆ.