Advertisement

ಟಾಟಾ ಸ್ಟೀಲ್‌ ಕೋಲ್ಕತಾ 25ಕೆ ಮ್ಯಾರಥಾನ್‌: ಬಾರ್ಸೊಟನ್‌, ಶೋನ್‌ ವಿನ್‌

10:00 AM Dec 17, 2019 | Team Udayavani |

ಕೋಲ್ಕತಾ, ಡಿ. 15: ರವಿವಾರ ನಡೆದ 100,000 ಡಾಲರ್‌ ಬಹು
ಮಾನದ “ಟಾಟಾ ಸ್ಟೀಲ್‌ ಕೋಲ್ಕತಾ 25ಕೆ ಮ್ಯಾರಥಾನ್‌’ ಸ್ಪರ್ಧೆ ಯಲ್ಲಿ ಕೀನ್ಯದ ಲಿಯೋನಾರ್ಡ್‌ ಬಾರ್ಸೊಟನ್‌ ಮತ್ತು ಇಥಿಯೋಪಿಯಾದ ಗುಟೆನಿ ಶೋನ್‌ ಕ್ರಮವಾಗಿ ಪುರುಷರ ಹಾಗೂ ಮಹಿಳಾ ವಿಭಾಗದ ಚಾಂಪಿ ಯನ್‌ ಆಗಿದ್ದಾರೆ.

Advertisement

ಭಾರತೀಯ ಪುರುಷರ ವಿಭಾಗ ದಲ್ಲಿ ಶ್ರಿನು ಬುಗಥ ಮತ್ತು ವನಿತಾ ವಿಭಾಗದಲ್ಲಿ ಕಿರಣ್‌ಜೀತ್‌ ಕೌರ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

2 ವಾರಗಳ ಹಿಂದಷ್ಟೇ ಈ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ಖಚಿತ
ಪಡಿಸಿದ ಬಾರ್ಸೊಟನ್‌ 1 ಗಂಟೆ, 13 ನಿಮಿಷ, 05 ಸೆಕೆಂಡ್‌ ಗಳಲ್ಲಿ ದೂರವನ್ನು ಕ್ರಮಿಸಿ ಮೊದಲಿಗ ರಾದರು. ಇಥಿಯೋಪಿಯಾದ ಬಿಟೆಸ್ಫ ಗೆಟಹುನ್‌ (1:13:33) ಮತ್ತು ಬೇಲಿನ್‌ ಯೆಗÕ (1:13:36) ದ್ವಿತೀಯ ಹಾಗೂ ತೃತೀಯ ಸ್ಥಾನಿಯಾದರು.

ಶೋನ್‌ ನೂತನ ದಾಖಲೆ
ವನಿತಾ ವಿಭಾಗದಲ್ಲಿ ಗುಟೆನಿ ಶೋನ್‌ 1:22:09 ಅವಧಿಯಲ್ಲಿ ಈ ದೂರನ್ನು ಕ್ರಮಿಸಿ ನೂತನ ದಾಖಲೆ ಸ್ಥಾಪಿಸಿದರು. ಹಿಂದಿನ ದಾಖಲೆ ಆ್ಯಮ್‌ಸ್ಟರ್‌ಡ್ಯಾಮ್‌ನ ಡಿಗೆಟು ಅಜಿಮಿರಾ ಹೆಸರಲ್ಲಿತ್ತು (1:26:01). ಇದನ್ನು 4 ನಿಮಿಷಗಳ ಅಂತರದಲ್ಲಿ ಶೋನ್‌ ಉತ್ತಮ ಪಡಿಸಿದರು. ಬಹ್ರೈನ್‌ನ ದೆಸಿ ಜಿಸಾ (1:23:32) ಮತ್ತು ಟೆಜಿಟಿ ದಾಬಾ (1:24:32) ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದರು.

ವಿಜೇತರಿಬ್ಬರಿಗೂ 7,500 ಡಾಲರ್‌ ಬಹುಮಾನ ಲಭಿಸಿತು.

Advertisement

ಭಾರತೀಯರ ವಿಭಾಗ
ಭಾರತೀಯ ವಿಭಾಗದ ಪುರುಷರ ಸ್ಪರ್ಧೆಯಲ್ಲಿ ಶ್ರಿನು ಬುಗಥ 1:18:31 ಅವಧಿಯಲ್ಲಿ ದೂರ ವನ್ನು ಕ್ರಮಿಸಿದರು. ವನಿತಾ ವಿಭಾಗ ದಲ್ಲಿ ಬಂಗಾಲದ ಶ್ಯಾಮಿಲಿ ಸಿಂಗ್‌ ಮುಂದಿದ್ದರೂ ಓಟದ ನಡುವೆ ಅನಾರೋಗ್ಯಕ್ಕೆ ಸಿಲುಕಿದ್ದರಿಂದ ಬ್ರೇಕ್‌ ಪಡೆದರು. ಹೀಗಾಗಿ ಕಿರಣ್‌ ಜೀತ್‌ ಕೌರ್‌ (1:38:56) ಮೊದಲಿಗ ರಾದರು. ಶ್ಯಾಮಿಲಿ ದ್ವಿತೀಯ ಸ್ಥಾನಿಯಾದರು (1:39:02). ಆರತಿ ಪಾಟೀಲ್‌ ಮೂರನೆಯವರಾದರು.

ಭಾರತದ ಚಾಂಪಿಯನ್ನರಿಗೆ 2.75 ಲಕ್ಷ ರೂ. ಬಹುಮಾನ ಸಿಕ್ಕಿತು.

Advertisement

Udayavani is now on Telegram. Click here to join our channel and stay updated with the latest news.

Next