ದೇಶದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಹೊಸಮಾದರಿಯ ಲಘು ವಾಣಿಜ್ಯ ವಾಹನಗಳನ್ನುಬಿಡುಗಡೆ ಮಾಡಿದೆ. ಅಲ್ಟ್ರಾ ಸ್ಲೀಕ್ ಟಿ ಸೀರಿಸ್ ನಲ್ಲಿ ಮೂರು ಮಾದರಿಯ ವಾಹನಗಳನ್ನುಗುರುವಾರವಷ್ಟೇ ಲಾಂಚ್ ಮಾಡಲಾಗಿದೆ.
ಪ್ರಮುಖವಾಗಿ ನಗರಗಳಲ್ಲಿನ ಸಂಚಾರವನ್ನೇ ಗಮನದಲ್ಲಿರಿಸಿಕೊಂಡು ಈ ವಾಹನಗಳನ್ನುರೂಪಿಸಲಾಗಿದೆ. ಇದರಲ್ಲಿ ಟಿ.6, ಟಿ.7 ಮತ್ತು ಟಿ.9 ಎಂಬ ಮಾದರಿಗಳಿವೆ. 10ರಿಂದ 20 ಅಡಿ ಉದ್ದದ ಡೆಕ್‌ನಲ್ಲಿ ಈ ವಾಹನಗಳು ಸಿಗಲಿವೆ. 1900 ಎಂಎಂ ಅಗಲದ ಕ್ಯಾಬಿನ್ ಉತ್ತಮ ಡ್ರೈವಿಂಗ್ ಅನುಭವ ನೀಡಲಿದೆ. ಅಷ್ಟೇ ಅಲ್ಲ, ಇದರಲ್ಲಿನ ಸ್ಮಾರ್ಟ್ ಫೀಚರ್‌ಗಳು ಡ್ರೈವಿಂಗ್ ನ ಅನುಭವಕ್ಕೆ ಇನ್ನಷ್ಟು ಮೆರಗು ನೀಡಲಿವೆ. ಅಷ್ಟೇ ಅಲ್ಲ, ಸೇಫ್ಟಿ ವಿಚಾರದಲ್ಲೂ ಈ ವಾಹನ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ ಎಂದು ಕಂಪನಿಯೇ ಹೇಳಿಕೊಂಡಿದೆ.
ಅಡ್ಜಸ್ಟಬಲ್ ಸೀಟುಗಳು, ಪವರ್ ಸ್ಟೇರಿಂಗ್, ಡ್ಯಾಶ್ ಬೋರ್ಡ್‌ಗೆ ಹೊಂದಿಕೊಂಡಿರುವ ಗೇರ್ ಬಾಕ್ಸ್, ಇನ್ ಬಿಲ್ಟ್ ಮ್ಯೂಸಿಕ್ ಸಿಸ್ಟಮ್, ಯುಎಸ್ ಬಿ ಫಾಸ್ಟ್ಚಾರ್ಜಿಂಗ್ ಪೋರ್ಟ್, ವಿಶಾಲವಾದ ಸ್ಟೋರೇಜ್ ಸ್ಪೇಸ್ ಗಳ ವೈಶಿಷ್ಟ್ಯವೂ ಈ ವಾಹನಕ್ಕಿದೆ.
ಅಲ್ಲದೇ ಇದು ನಾಲ್ಕು ಮತ್ತು ಆರು ಟೈರುಗಳವೇರಿಯಂಟ್‌ನಲ್ಲೂ ಸಿಗಲಿದೆ. ಪ್ರಮುಖವಾಗಿ ಇಕಾಮರ್ಸ್ ವಸ್ತುಗಳ ಸಾಗಾಟ, ಸಿಲಿಂಡರ್‌ಗಳ ಸಾಗಣೆ, ಕೋವಿಡ್ ಲಸಿಕೆ, ಔಷಧಿಗಳು, ಆಹಾರ ವಸ್ತುಗಳಾದ ಮೊಟ್ಟೆ, ಹಾಲು ಮತ್ತು ಕೃಷಿ ವಸ್ತುಗಳ ಸಾಗಾಟಕ್ಕೆ ತಕ್ಕಂತೆ ಇದನ್ನು ರೂಪಿಸಲಾಗಿದೆ ಎಂದು ಕಂಪನಿ ಹೇಳಿದೆ.
ಬರಲಿದೆ ಹುಂಡೈ ಅಲ್ಕಾಝಾರ್ : ಜಗತ್ತಿನ ಪ್ರಖ್ಯಾತ ಕಾರು ತಯಾರಕ ಸಂಸ್ಥೆ ಹುಂಡೈ, ತನ್ನ ಹೊಸ 7 ಸೀಟಿನ ಎಸ್ ಯುವಿಯನ್ನು ಮಾರುಕಟ್ಟೆಗೆ ಬಿಡಲು ತಯಾರಿ ನಡೆಸಿದೆ. ಈ ವರ್ಷವೇ ಭಾರತವೂ ಸೇರಿದಂತೆ ಜಗತ್ತಿನ ಎಲ್ಲೆಡೆ ತನ್ನ ಹೊಸ ಕಾರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಹುಂಡೈ ಅಲ್ಕಾಝಾರ್ ಎಂಬ ಹೆಸರಿನ ಈ ಎಸ್ ಯುವಿ ಬಗ್ಗೆ ಟೀಸರ್ ವಿಡಿಯೋ ಬಿಡುಗಡೆ ಮಾಡಿದ್ದು, ಈ ವರ್ಷವೇ ಬರಲಿದ್ದೇವೆ ಎಂದಿದೆ. ಅಷ್ಟೇ ಅಲ್ಲ, ತನ್ನ ಅಧಿಕೃತ ವೆಬ್ ಸೈಟ್‌ನಲ್ಲೂ ಹೊಸ ಎಸ್ ಯುವಿ ಬಗ್ಗೆ ಪಟ್ಟಿ ಮಾಡಿದೆ. ಈ ಕಾರು ಈಗಾಗಲೇ ಇರುವ ಕ್ರೀಟಾಗಿಂತ ಮೇಲಿನದ್ದಾಗಿರಬಹುದು ಎಂಬಮಾತುಗಳಿವೆ. 2021ರ ಎರಡನೇ ತ್ತೈಮಾಸಿಕದಲ್ಲಿ ಇದು ಬಿಡುಗಡೆಯಾಗಬಹುದು. ಅಂದರೆ ಮೇನಲ್ಲಿ ಲಾಂಚ್ ಆಗಬಹುದಾಗಿದ್ದು, ಏಪ್ರಿಲ್ ಮಧ್ಯಭಾಗದಿಂದಲೇ ಬುಕಿಂಗ್ ಶುರುವಾಗಬಹುದು ಎಂದು ಹೇಳಲಾಗುತ್ತಿದೆ.
ದರ ವಿವರ :
(ದೆಹಲಿ ಎಕ್ಸ್ ಶೋ ರೂಂ ದರ)
ಅಲ್ಟ್ರಾ ಸ್ಲೀಕ್ ಟಿ.6 13,99,000 ರೂ.
ಅಲ್ಟ್ರಾ ಸ್ಲೀಕ್ ಟಿ.7 15,29,000 ರೂ.
ಅಲ್ಟ್ರಾ ಸ್ಲೀಕ್‌ಟಿ.9 17,29,000 ರೂ.
-ಸೋಮಶೇಖರ ಸಿ.ಜೆ.