Advertisement

Nexon EV Max Edition; ಕನ್ನಡ ಸೇರಿ 6 ಭಾಷೆಗಳಲ್ಲಿ ವಾಯ್ಸ ಅಸಿಸ್ಟ್‌ ಸಿಸ್ಟಮ್‌

07:24 PM Apr 18, 2023 | Team Udayavani |

ಜನಪ್ರಿಯ ವಾಹನ ತಯಾರಕ ಸಂಸ್ಥೆ ಟಾಟಾ ಮೋಟರ್ಸ್‌ನ ಪ್ರಖ್ಯಾತ ವಾಹನ ನೆಕ್ಸಾನ್‌ನ ಇವಿ (ಇಲೆಕ್ಟ್ರಾನಿಕಲ್‌ ವೆಹಿಕಲ್‌) ಆವೃತ್ತಿಯ ಡಾರ್ಕ್‌ ಎಡಿಷನ್‌ ಕಾರು ಭಾರತದಲ್ಲಿ ಬಿಡುಗಡೆಗೊಂಡಿದೆ.

Advertisement

ಅತ್ಯಾಧುನಿಕ ಕಮಾಂಡಿಂಗ್‌ ಟೆಕ್ನಾಲಜಿ ಜತೆಗೆ 10.25 ಇಂಚಿನ ಇನ್ಫೋಟೈನ್‌ಮೆಂಟ್‌ ಡಿಸ್‌ಪ್ಲೇ ಅನ್ನೂ ಡಾರ್ಕ್‌ ಎಡಿಷನ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ.

ರೇರ್‌ ವ್ಯೂ ಕ್ಯಾಮೆರಾ, ಎಚ್‌ಡಿ ಡಿಸ್‌ಪ್ಲೇ ಜತೆಗೆ ಕನ್ನಡ ಸೇರಿದಂತೆ 6 ಪ್ರಾದೇಶಿಕ ಭಾಷೆಗಳಲ್ಲಿನ ವಾಯ್ಸ ಅಸಿಸ್ಟ್‌ ಸಿಸ್ಟಮ್‌ಗಳನ್ನೂ ಅಭಿವೃದ್ಧಿ ಪಡಿಸಲಾಗಿದೆ. ಮಿಡ್‌ನೈಟ್‌ ಬ್ಲ್ಯಾಕ್‌ ಹಾಗೂ ಚಾರ್ಕೋಲ್‌ ಗ್ರೇ ಬಣ್ಣಗಳಲ್ಲಿ ಕಾರ್‌ ಲಭ್ಯವಿರುವುದರ ಜತೆಗೆ ಚಾರ್ಜಿಂಗ್‌ ಸಾಮರ್ಥ್ಯದ ಆಧಾರದಲ್ಲಿಯೂ 2 ಆವೃತ್ತಿಗಳನ್ನು ಉತ್ಪಾದಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next