Advertisement
1932 ರಲ್ಲಿ ಜೆಆರ್‌ಡಿ ಟಾಟಾ ಅವರು ಟಾಟಾ ಏರ್‌ಲೈನ್ಸ್ ಸಂಸ್ಥೆಯನ್ನು ಆರಂಭಿಸಿದರು. ಸ್ವತಃ ಪೈಲಟ್ ಆಗಿದ್ದ ಜೆಆರ್‌ಡಿ ಟಾಟಾ ತಾವೇ ಚಾಲನೆ ಮಾಡುವ ಮೂಲಕ ಉದ್ಘಾಟಿಸಿದರು. ಮೊದಲ ಹಾರಾಟವು ಕರಾಚಿಯಿಂದ ಬಾಂಬೆಗೆ ನಡೆಸಿತು. ಹ್ಯಾವಿಲ್ಯಾಂಡ್ ಪುಸ್ ಮಾತ್ ಮೊದಲ ವಿಮಾನ. ಆಗ ಬಾಂಬೆ ವಿಮಾನ ನಿಲ್ದಾಣದಲ್ಲಿ ಸರಿಯಾದ ರನ್‌ವೇ ಇರಲಿಲ್ಲ. ರೇಡಿಯೋ ಸಿಗ್ನಲ್, ನ್ಯಾವಿಗೇಶನ್ ವ್ಯವಸ್ಥೆ ಯಾವುದೂ ಇರಲಿಲ್ಲ. ಅಹಮದಾಬಾದ್, ಬಾಂಬೆ, ಚೆನ್ನೈ, ತಿರುವನಂತಪುರಂ ನಡುವೆ 1933 ರಲ್ಲಿ ಪ್ರಯಾಣಿಕ ಹಾಗೂ ಸರಕು ವಿಮಾನಗಳು ಹಾರಾಟ ನಡೆಸಿದವು. ಆಗ ದಿಲ್ಲಿಯಿಂದ ಬಾಂಬೆಗೆ ಇದ್ದ ಟಿಕೆಟ್ ದರ ಕೇವಲ 75 ರೂ.
Related Articles
Advertisement
ಭಾರತ ಸರಕಾರವು 1953 ರಲ್ಲಿ ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳನ್ನು ರಾಷ್ಟ್ರೀಕೃತಗೊಳಿಸಿತು. ಈ ವೇಳೆ ಸರ್ಕಾರವು ಇಂಡಿಯನ್ ಏರ್‌ಲೈನ್ಸ್ ಕಾರ್ಪೊರೇಶನ್ ಮತ್ತು ಏರ್ ಇಂಡಿಯಾ ಲಿಮಿಟೆಡ್ ಎಂಬ ಎರಡು ನಿಗಮಗಳನ್ನು ರಚಿಸಿತ್ತು. 1962ರಲ್ಲಿ ಏರ್ ಇಂಡಿಯಾ ಇಂಟರ್‌ನ್ಯಾಷನಲ್ ಕಾರ್ಪೊರೇಷನ್ನು ಏರ್ ಇಂಡಿಯಾ ಎಂದು ಸಂಕ್ಷಿಪ್ತಗೊಳಿಸಲಾಯಿತು.
ಮೊದಲ ಮಾರಾಟ ಯತ್ನ: ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ 2001ರಲ್ಲಿ ಏರ್‌ಲೈನ್ ಮಾರಾಟದ ಮೊದಲ ಪ್ರಯತ್ನ ಮಾಡಿತು. ಏರ್ ಇಂಡಿಯಾದ ಶೇ. 40ರಷ್ಟು ಶೇರುಗಳನ್ನು ಮಾರಾಟಕ್ಕಿಡಲಾಗಿತ್ತು. 2007 ರಲ್ಲಿ ಏರ್ ಇಂಡಿಯಾ ತನ್ನ ದೇಶೀಯ ಘಟಕ ಇಂಡಿಯನ್ ಏರ್‌ಲೈನ್ಸ್‌ನೊಂದಿಗೆ ವಿಲೀನಗೊಂಡಿತ್ತು. 2018ರಲ್ಲಿ ಸರಕಾರ ಸಂಸ್ಥೆಯ ಮಾರಾಟಕ್ಕೆ ಪ್ರಯತ್ನಿಸಿತು. 50,000 ಕೋಟಿ ರೂ. ಗಿಂತ ಅಧಿಕ ಸಾಲವನ್ನು ಏರ್ ಇಂಡಿಯಾ ಸಂಸ್ಥೆಯ ಅನುಭವಿಸುತ್ತಿತ್ತು. ಈ ಬಾರಿ, ಸಂಸ್ಥೆಯಲ್ಲಿನ ಶೇ.24 ಷೇರುಗಳನ್ನು ಉಳಿಸಿಕೊಳ್ಳಲು ಸರಕಾರ ನಿರ್ಧರಿಸಿತು. ಆದರೆ ಯಾವುದೇ ಬಿಡ್ ಬಾರದ ಕಾರಣ ಯತ್ನ ವಿಫಲವಾಗಿತ್ತು.