Advertisement

ಮಕ್ಕಳಿಗೆ ಚಿತ್ರಕಲೆಯ ಅಭಿರುಚಿ ಮೂಡಿಸಿ: ಪ್ರೊ.ಮಾಲಗತ್ತಿ ಸಲಹೆ

12:35 PM Apr 28, 2017 | Team Udayavani |

ಮೈಸೂರು: ಪೋಷಕರು ತಮ್ಮ ಮಕ್ಕಳನ್ನು ಹಿಡಿದಿಟ್ಟುಕೊಳ್ಳುವುದು ಮಕ್ಕಳನ್ನು ತಕ್ಕಡಿಗೆ ಹಾಕಿದಂತಾಗಲಿದ್ದು, ಇದರ ಬದಲಿಗೆ ಚಿತ್ರಕಲೆಯ ಅಭ್ಯಾಸ ಮಾಡಿಸುವುದು ಉತ್ತಮ ಆಲೋಚನೆ ಯಾಗಿದೆ ಎಂದು ಸಾಹಿತಿ ಪೊ›. ಅರವಿಂದ ಮಾಲಗತ್ತಿ ಹೇಳಿದರು.

Advertisement

ನಗರದ ಜೆಎಸ್‌ಎಸ್‌ ಮಹಾವಿದ್ಯಾಪೀಠದ ವತಿಯಿಂದ ಅಗ್ರಹಾರದ ಜೆಎಸ್‌ಎಸ್‌ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಚಿತ್ರಕಲಾ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ವರ್ಷವಿಡೀ ಶೈಕ್ಷಣಿಕ ಚಟುವಟಿಕೆಗಳ ಒತ್ತಡದಲ್ಲಿರುವ ಮಕ್ಕಳು ಬೇಸಿಗೆ ರಜೆ ಬಂತೆಂದರೆ ಅಜ್ಜಿ-ತಾತನ ಮನೆಗೆ ಹೋಗುವುದು ಸಹಜ.

ಇಂತಹ ಸಂದರ್ಭದಲ್ಲಿ ಮಕ್ಕಳ ಹಿಡಿದಿಟ್ಟುಕೊಂಡರೆ ಅದರಿಂದ ಮಕ್ಕಳ ಆಟೋಟ ಹಾಗೂ ಮನರಂಜನೆಗೂ ಅಡ್ಡಿಯಾಗಲಿದೆ. ಹೀಗೆ ಮಕ್ಕಳನ್ನು ಹಿಡಿದಿಟ್ಟುಕೊಂಡು ತಕ್ಕಡಿಗೆ ಹಾಕುವಂತೆ ಮಾಡುವ ಬದಲು ಮಕ್ಕಳಿಗೆ ಚಿತ್ರಕಲೆಯ ಅಭಿರುಚಿ ಮೂಡಿಸುವುದು ಉತ್ತಮ ಅಭ್ಯಾಸವಾಗಲಿದೆ.

ಈ ನಿಟ್ಟಿನಲ್ಲಿ ಪ್ರಸ್ತುತ ಚಿತ್ರಕಲಾ ಶಿಬಿರಕ್ಕೆ ಹೆಚ್ಚಿನ ಸಂಖ್ಯೆ ಮಕ್ಕಳು ಭಾಗವಹಿಸಿರುವುದು ಉತ್ತಮ ಬೆಳವಣಿಗೆ ಎಂದರು. ಕಲಾನಿಕೇತನ ಸ್ಕೂಲ್‌ ಆಪ್‌ ಆರ್ಟ್ಸ್ನ ಉಪನ್ಯಾಸಕ ವಿಠಲರೆಡ್ಡಿ ಚುಳಕಿ, ನಿರ್ದೇಶಕರಾದ ಪ್ರೊ.ಮೊರಬದ ಮಲ್ಲಿಕಾರ್ಜುನ ಇನ್ನಿತರರು ಹಾಜರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next