Advertisement

ಭಾರತ ‘ಸುಂಕಗಳ ರಾಜ’ : ಟ್ರಂಪ್‌ ಆಕ್ರೋಶ

08:10 AM Oct 03, 2018 | Karthik A |

ವಾಷಿಂಗ್ಟನ್‌ : ಭಾರತವನ್ನು ‘ಸುಂಕಗಳ ರಾಜ’ (ಟ್ಯಾರಿಫ್ ಕಿಂಗ್‌) ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟೀಕಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿದ್ದಾಗಿ ಹೇಳಿದ್ದಾರೆ. ಜತೆಗೆ ತಮ್ಮನ್ನು ಸಂತೋಷ ಗೊಳಿಸಲು ಕ್ಷಿಪ್ರವಾಗಿ ಸಮಗ್ರ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಲು ಭಾರತ ಉತ್ಸುಕ ವಾಗಿದೆ ಎಂದು ಹೇಳಿದ್ದಾರೆ. ಸೋಮವಾರ ಕೆನಡಾ ಮತ್ತು ಮೆಕ್ಸಿಕೋ ಜತೆ ವ್ಯಾಪಾರ ಒಪ್ಪಂದಕ್ಕೆ ವಾಷಿಂಗ್ಟನ್‌ನಲ್ಲಿ ಸಹಿ ಹಾಕಿದ ಬಳಿಕ ಅವರು ಮಾತನಾಡುವ ವೇಳೆ ಈ ಅಂಶ ಪ್ರಸ್ತಾವ ಮಾಡಿದ್ದಾರೆ. ಭಾರತ ಅಮೆರಿಕದ ವಸ್ತುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸುಂಕ ವಿಧಿಸುತ್ತಿದೆ ಎಂಬ ಆರೋಪವನ್ನು ಟ್ರಂಪ್‌ 2ನೇ ಬಾರಿಗೆ ಮಾಡುತ್ತಿದ್ದಾರೆ.

Advertisement

‘ಅಮೆರಿಕದ ಹರ್ಲೆ ಡೇವಿಡ್‌ಸನ್‌ ಮೋಟರ್‌ ಸೈಕಲ್‌ ಸೇರಿದಂತೆ ವಿವಿಧ ವಸ್ತುಗಳಿಗೆ ಭಾರತ ಸರಕಾರ ಹೆಚ್ಚಿನ ಪ್ರಮಾಣದಲ್ಲಿ ಸುಂಕ ವಿಧಿಸುತ್ತಿದೆ. ಹೀಗಾಗಿ ಅದು ‘ಸುಂಕಗಳ ರಾಜ’. ನನ್ನನ್ನು ಸಂತೋಷಪಡಿಸುವ ದೃಷ್ಟಿಯಿಂದ ಭಾರತ ಶೀಘ್ರವೇ ಸಮಗ್ರ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದೆ’ ಎಂದು ಹೇಳಿದ್ದಾರೆ. ಸುಂಕ ವಿಧಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ಈಗಾಗಲೇ ಚರ್ಚೆ ನಡೆಸಿದ್ದಾಗಿಯೂ ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಅದನ್ನು ತಗ್ಗಿಸುವ ವಾಗ್ಧಾನವನ್ನು ಮೋದಿ ನೀಡಿದ್ದಾರೆ  ಎಂದರು. ಅಮೆರಿಕ ಹಿಂದಿನ ಸರಕಾರಗಳ ಅವಧಿಯಲ್ಲಿ ಈ ಬಗ್ಗೆ ಭಾರತದ ಜತೆ ಯಾರೂ ಮಾತನಾಡಿಲ್ಲ ಎಂದು ಟೀಕಿಸಿದ್ದಾರೆ. ಇದರ ಹೊರತಾಗಿಯೂ ಅಮೆರಿಕ ಮತ್ತು ಭಾರತದ ನಡುವಿನ ಬಾಂಧವ್ಯ ಅತ್ಯಂತ ಉತ್ತಮವಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next