Advertisement

The Kerala Story; ಉಗ್ರರೇ ಟಾರ್ಗೆಟ್‌,ಮುಸ್ಲಿಮರಲ್ಲ

08:45 PM May 01, 2023 | Team Udayavani |

ತಿರುವನಂತಪುರ: “ದಿ ಕೇರಳ ಸ್ಟೋರಿ’ ಸಿನಿಮಾವನ್ನು ಉಗ್ರರನ್ನು ಗುರಿಯಾಗಿಸಿಕೊಂಡು ನಿರ್ಮಾಣ ಮಾಡಲಾಗಿದೆ. ಮುಸ್ಲಿಮರನ್ನು ಗುರಿಯಾಸಿಕೊಂಡು ಅಲ್ಲ ಎಂದು ಸಿನಿಮಾ ನಿರ್ದೇಶಕ ಸುದೀಪ್ತೋ ಸೆನ್‌ ಮತ್ತು ವಿಪುಲ್‌ ಶಾ ಹೇಳಿದ್ದಾರೆ.

Advertisement

“ಇಂಡಿಯಾ ಟುಡೇ’ ಆಂಗ್ಲ ಸುದ್ದಿವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು “ಹಲವು ತಿಂಗಳ ಸಂಶೋಧನೆಯ ನಂತರ ಈ ಚಿತ್ರವನ್ನು ನಿರ್ಮಿಸಲಾಗಿದೆ. ಅನೇಕ ನಿರ್ಮಾಪಕರು ಈ ಚಿತ್ರಕ್ಕೆ ಹಣ ಹೂಡಲು ನಿರಾಕರಿಸಿದರು. ಸಂತ್ರಸ್ತರೊಂದಿಗೆ ಮಾತನಾಡಿದ ನಂತರ ನನ್ನ ದೃಷ್ಟಿಕೋನ ಬದಲಾಯಿತು,’ ಎಂದು ಹೇಳಿದ್ದಾರೆ.

“ಈ ಚಿತ್ರವು ಕೇರಳ ರಾಜ್ಯದ ವಿರುದ್ಧವಿಲ್ಲ. ಸಿನಿಮಾದಲ್ಲಿ ಯಾವುದೇ ಅಂಶವನ್ನೂ ಅವಹೇಳನಕಾರಿಯಾಗಿ ಚಿತ್ರಿಸಲಾಗಿಲ್ಲ, ಅದರಲ್ಲಿ ಉಗ್ರರನ್ನು ಗುರಿಯಾಗಿಸುತ್ತದೆ ಹೊರತು ಮುಸ್ಲಿಮರನ್ನು ಅಲ್ಲ. ಈ ಚಿತ್ರವನ್ನು ಕೇರಳ ಸಿಎಂ ವೀಕ್ಷಿಸಬೇಕು,’ ಎಂದು ಚಿತ್ರದ ನಿರ್ಮಾಪಕ ವಿಫ‌ುಲ್‌ ಶಾ ಸ್ಪಷ್ಟನೆ ನೀಡಿದ್ದಾರೆ.

ನಿಷೇಧಕ್ಕೆ ಒತ್ತಾಯ:
ಸಿನಿಮಾ ನಿಷೇಧ ಮಾಡುವಂತೆ ಸಿಪಿಎಂ ನೇತೃತ್ವದ ಎಲ್‌ಡಿಎಫ್, ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಒತ್ತಾಯಿಸುತ್ತಿವೆ. ಇದರ ಜತೆಗೆ ಕೇರಳದ ಸಂಸ್ಕೃತಿ ಸಚಿವ ಸಾಜಿ ಚೆರಿಯನ್‌ ಈಗಾಗಲೇ ಸಿನಿಮಾ ನಿಷೇಧದ ಬಗ್ಗೆ ಮಾತನಾಡಿದ್ದಾರೆ.

ಸಾಕ್ಷ್ಯ ನೀಡಿದರೆ 11 ಲಕ್ಷ ರೂ.:
“32,000 ಯುವತಿಯರು ಇಸ್ಲಾಂಗೆ ಮತಾಂತರವಾಗಿ, ಐಸಿಸ್‌ಗೆ ಸೇರ್ಪಡೆಯಾದರು ಎಂದು ಸಿನಿಮಾದಲ್ಲಿ ಆರೋಪಿಸಲಾಗಿದೆ. ಈ ರೀತಿ ಆದ 32,000 ಅಲ್ಲ , 32 ಮಹಿಳೆಯರ ಬಗ್ಗೆ ಸಾಕ್ಷ್ಯ ನೀಡಿದರೆ 11 ಲಕ್ಷ ರೂ. ನೀಡುತ್ತೇನೆ,’ ಎಂದು ವಕೀಲ, ನಟ ಸಿ.ಶುಕ್ಕೂರ್‌ ಸವಾಲು ಹಾಕಿದ್ದಾರೆ. ಬಹುನಿರೀಕ್ಷಿತ ಸಿನಿಮಾ ಮೇ 5ರಂದು ಬಿಡುಗಡೆಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next