Advertisement
ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲೇ ಬೇಕೆಂದು ರಾಹುಲ್‌ಗಾಂಧಿ ನೀಡಿರುವ “ಟಾರ್ಗೆಟ್’ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಚಿಂತೆ ಶುರುವಾಗಿದೆ.
Related Articles
ಆರು ತಿಂಗಳ ಮುಂಚೆಯೇ ಅಭ್ಯರ್ಥಿಗಳ ಘೋಷಣೆಗೆ ರಾಹುಲ್‌ಗಾಂಧಿ ಸಮ್ಮತಿಸಿರುವುದರಿಂದ ಮುಂದಿನ ವಾರದಿಂದ ಜಿಲ್ಲಾವಾರು ಸಭೆ ನಡೆಸಿ ಅಭಿಪ್ರಾಯ ಸಂಗ್ರಹಕ್ಕೂ ರೂಪುರೇಖೆ ಸಿದ್ಧಪಡಿಸಲಾಗುತ್ತಿದೆಯಾದರೂ ಜಿಲ್ಲಾ ಮಟ್ಟದಲ್ಲಿ ಪಕ್ಷದಲ್ಲಿ ಗುಂಪುಗಾರಿಕೆ, ಒಬ್ಬರನ್ನೊಬ್ಬರು ಕಾಲೆಳೆಯುವುದು ಹೆಚ್ಚಾಗಿದ್ದು ಅದನ್ನು ಸರಿಪಡಿಸಿ ಎಲ್ಲರನ್ನೂ ಒಟ್ಟುಗೂಡಿಸುವುದು ದೊಡ್ಡ ಸವಾಲಾಗಿದೆ.
Advertisement
ಉದಾಹರಣೆಗೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಮೇಶ್‌ಕುಮಾರ್ ಬಣ, ಕೆ.ಎಚ್.ಮುನಿಯಪ್ಪ ಬಣ ಎಂಬಂತಾಗಿದೆ. ಬಹಿರಂಗ ವೇದಿಕೆಯಲ್ಲೇ ಕೆ.ಎಚ್.ಮುನಿಯಪ್ಪ, ಏಯ್ ರಮೇಶ್‌ಕುಮಾರ್ ಮುಂದಿನ ಬಾರಿ ಹೇಗೆ ಗೆಲ್ಲುತ್ತೀಯ ನೋಡ್ತೇನೆ ಎಂದು ಸವಾಲು ಹಾಕಿದ್ದಾರೆ. ಇದು ಎರಡು ಜಿಲ್ಲೆಯ ಕಥೆಯಲ್ಲ ಹಲವು ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ. ಡಿ. ಕೆ. ಶಿವ ಕುಮಾರ್ ಬಣ, ಸಿದ್ದರಾಮಯ್ಯ ಬಣ ಎಂದು ಬಿಂಬಿತವಾಗಿದೆ. ಮೊದಲು ಸ್ಥಳೀಯ ಮಟ್ಟದ ಸಮಸ್ಯೆ ಸರಿಪಡಿಸ ಬೇಕಿದೆ. ಪಂಚರಾಜ್ಯ ಗಳ ಫಲಿತಾಂಶ ಅನಂತರ ಕಾಂಗ್ರೆಸ್‌ನಲ್ಲಿರುವ ನಾಯಕರು, ಕಾಂಗ್ರೆಸ್‌ನತ್ತ ಬರಲು ಸಿದ್ಧವಾಗಿದ್ದವರೂ ಬಿಜೆಪಿ ಹಾಗೂ ಜೆಡಿಎಸ್‌ನತ್ತ ಕಣ್ಣು ಹಾಯಿಸುತ್ತಿ ದ್ದಾರೆ. ಟಿಕೆಟ್ ವಂಚಿತರ “ಹಾರಾಟ’ವೂ ಇದ್ದೇ ಇರುತ್ತದೆ. ಇದು ಚುನಾವಣ ಹೊಸ್ತಿ ಲಲ್ಲಿ ದೊಡ್ಡ ಹೊಡೆತವನ್ನೇ ಕೊಡಬ ಹುದು. ಇದನ್ನು ನಿಭಾಯಿಸುವುದು ನಾಯಕ ರಿಗೆ ಒಂದು ರೀತಿಯ ಅಗ್ನಿಪರೀಕ್ಷೆಯೇ ಸರಿ.
ಚರ್ಚೆಗೆ ಗ್ರಾಸ“ನಮ್ಮ ಹೋರಾಟದ ಬಗ್ಗೆ ಸ್ಪಷ್ಟತೆ ಇರಬೇಕು. ನಮ್ಮನ್ನು ನಂಬಿದವರ ಜತೆ ನಾವು ಗಟ್ಟಿಯಾಗಿ ನಿಲ್ಲಬೇಕು. ಯಾರೋ ಏನೋ ಅಂದುಕೊಳ್ಳುತ್ತಾರೆ ಎಂದು ಹಿಂದೇಟು ಹಾಕಬಾರದು’ ಎಂದು ರಾಹುಲ್‌ಗಾಂಧಿ ಸಮ್ಮುಖದಲ್ಲೇ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರು ಆಡಿದ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ, ಹಿಜಾಬ್, ಹಲಾಲ್ ಕಟ್, ಮಸೀದಿಗಳಲ್ಲಿ ಮೈಕ್ ಬ್ಯಾನ್ ವಿಚಾರದಲ್ಲಿ ಕಾಂಗ್ರೆಸ್ ನಮ್ಮ ಪರ ನಿರೀಕ್ಷಿತ ಪ್ರಮಾಣದಲ್ಲಿ ಧ್ವನಿ ಎತ್ತಲಿಲ್ಲ ಎಂಬ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ಮುನಿಸು ಇದೆ. ಸಮುದಾಯದ ನಾಯಕರಾದ ಜಮೀರ್ ಅಹಮದ್, ತನ್ವೀರ್ ಸೇs…, ನಸೀರ್ ಅಹಮದ್ ಅವರಿಗೂ ಇದು ಗೊತ್ತಿದೆ. ಇತ್ತೀಚೆಗೆ ಮುಸ್ಲಿಂ ಧಾರ್ಮಿಕ ಮುಖಂಡರೊಬ್ಬರು ನೇರವಾಗಿಯೇ ಅವರನ್ನು ಈ ವಿಚಾರದಲ್ಲಿ ತರಾಟೆಗೂ ತೆಗೆದುಕೊಂಡಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಗೊಂದಲದಲ್ಲಿದೆ ಎಂಬಂತೆ ಕಾಣುತ್ತದೆ. ಸಿದ್ದರಾಮಯ್ಯ ಅವರು ಮುಸ್ಲಿಂ ಸಮುದಾಯದ ಪರ ನೇರವಾಗಿಯೇ ಬ್ಯಾಟಿಂಗ್ ಮಾಡುವುದರಿಂದ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಕೊಟ್ಟಿಕೊಳ್ಳಬೇಕಾಗಬಹುದಾ ಎಂಬ ಆತಂಕ ಕೆಲವು ನಾಯಕರಿಗಿದೆ. ಹೀಗಾಗಿಯೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸ್ವಲ್ಪ ಮಟ್ಟಿಗೆ ಸಾಫ್ಟ್ ಹಿಂದುತ್ವದತ್ತ ಒಲವು ಹೊಂದಿರುವುದು ಕಂಡುಬರುತ್ತಿದೆ. ಮುಸ್ಲಿಂ ಪರ ಅತಿಯಾದ ಪ್ರೀತಿ ತೋರಿದರೆ ಹಿಂದೂ ಮತ ಕೈ ಬಿಡ ಬಹುದು ಎಂಬ ಆತಂಕ ಅವರದು. ಪ್ರತಿ ವಿಷಯದಲ್ಲೂ ಅಳೆದೂ ತೂಗಿ ಮಾತನಾಡುತ್ತಿದ್ದಾರೆ. ಇದರ ಮರ್ಮ ಅರಿತೇ ಜೆಡಿಎಸ್‌ನ ಎಚ್.ಡಿ.ಕುಮಾರ ಸ್ವಾಮಿ “ರಂಗ ಪ್ರವೇಶ’ ಮಾಡಿ ಕಳೆದೊಂದು ವಾರದಿಂದ ಮುಸ್ಲಿಂ ಸಮುದಾಯದ ಚಾಂಪಿಯನ್ ಆಗಿದ್ದಾರೆ. ಇದು ಕಾಂಗ್ರೆಸ್‌ಗೆ ಮತ್ತೂಂದು ರೀತಿಯ ತಲೆಬಿಸಿ ತಂದೊಡ್ಡಿದೆ. ಏಕೆಂದರೆ, ಜೆಡಿಎಸ್‌ಗೆ ಶಿಫ್ಟ್ ಆಗುವ ಒದೊಂದು ಮುಸ್ಲಿಂ ಮತವೂ ಕಾಂಗ್ರೆಸ್‌ನ ಶಕ್ತಿ ಕುಸಿತಕ್ಕೆ
ಕಾರಣವಾಗುತ್ತದೆ.ಇಷ್ಟರ ನಡುವೆಯೂ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಹಾಗೂ ಬೆಲೆ ಏರಿಕೆ, ಭ್ರಷ್ಟಾಚಾರ ಆರೋಪ ನಮಗೆ ವರವಾಗಬಹುದು ಎಂಬ ಅತಿಯಾದ ಆತ್ಮವಿಶ್ವಾಸ ಕಾಂಗ್ರೆಸ್‌ನದು.
ಆಪರೇಷನ್ ಕಮಲ ಕಾರ್ಯಾಚರಣೆಯಡಿ ಬಿಜೆಪಿಗೆ ಹೋಗಿದ್ದ ಪೂರ್ವಾಶ್ರಮದ ಕಾಂಗ್ರೆಸ್‌ನವರು ಉಪ ಚುನಾವಣೆಯಲ್ಲೂ ಮುಸ್ಲಿಂ ಮತ ಪಡೆದಿದ್ದಾರೆ. ಬಿಜೆಪಿಯ ಬೆಳವಣಿಗೆ ಅವರಲ್ಲಿ ಆತಂಕ ಮೂಡಿಸಿದೆ. ಈಗ ಅವರೆಲ್ಲರೂ ಕಾಂಗ್ರೆಸ್‌ನತ್ತ ನೋಡುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ, ಸಂಘಟನೆ ಗಟ್ಟಿಯಾಗದೆ ಬೇರೇನೋ ಕೈ ಹಿಡಿಯಬಹುದು ಎಂಬ ಕನಸು ನನಸಾಗುವುದು ಕಷ್ಟವೇ. -ಎಸ್.ಲಕ್ಷ್ಮಿನಾರಾಯಣ