Advertisement

ಉಕ್ಕಿ ಹರಿಯಲಾರಂಭಿಸಿದ ತಾನ್ಸಾ ಅಣೆಕಟ್ಟು

06:23 PM Aug 22, 2020 | Suhan S |

ಮುಂಬಯಿ, ಆ. 21: ಕಳೆದ ಕೆಲವು ದಿನಗಳಿಂದ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಮುಂಬಯಿಗೆ ಕುಡಿಯುವ ನೀರು ಪೊರೈಸುವ ಪ್ರಮುಖ ಜಲಾಶಯಗಳಲ್ಲಿ ಒಂದಾದ ತಾನ್ಸಾ ಅಣೆಕಟ್ಟು ಗುರುವಾರ ಸಂಜೆಯಿಂದ ಉಕ್ಕಿ ಹರಿಯಲಾರಂಭಿಸಿದೆ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ತಿಳಿಸಿದೆ.

Advertisement

ನೆರೆಯ ಥಾಣೆ ಜಿಲ್ಲೆಯಲ್ಲಿರುವ ತಾನ್ಸಾ ಅಣೆಕಟ್ಟು ತುಳಸಿ, ವಿಹಾರ್‌ ಮತ್ತು ಮೋಡಕ್‌ ಸಾಗರ್‌ ಅನಂತರ ಉಕ್ಕಿಹರಿಯಲು ಪ್ರಾರಂಭಿಸಿದ 4ನೇ ಜಲಾಶಯವಾಗಿದೆ ಎಂದು ಬಿಎಂಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ತಾನ್ಸಾ ಅಣೆಕಟ್ಟು ಗುರುವಾರ ಸಂಜೆ 7.05ಕ್ಕೆ ಉಕ್ಕಿ ಹರಿಯಲಾರಂಭಿಸಿತು. ಕಳೆದ ವರ್ಷ ಈ ಅಣೆಕಟ್ಟು ಜು. 25ರಂದು ಉಕ್ಕಿ ಹರಿದಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ನಗರಕ್ಕೆ 3,750 ಲಕ್ಷ ದಶಲಕ್ಷ ಲೀಟರ್‌ ಕುಡಿಯುವ ನೀರನ್ನು ಪೂರೈಸುವ ಈ 7 ಸರೋವರಗಳಲ್ಲಿ ಶೇ. 50ಕ್ಕಿಂತ ಕಡಿಮೆ ನೀರಿನ ಸಂಗ್ರಹ ಇದ್ದರಿಂದ ನಾಗರಿಕ ಸಂಸ್ಥೆಯು ಆ. 5ರಿಂದ ಮುಂಬಯಿಯಲ್ಲಿ ಶೇ. 20ರಷ್ಟು ನೀರಿನ ಕಡಿತವನ್ನು ವಿಧಿಸಿತ್ತು. ನಗರ ವ್ಯಾಪ್ತಿಯಲ್ಲಿರುವ ಮತ್ತೂಂದು ಸರೋವರವಾದ ಪೊವಾಯಿ ಸರೋವರ ಕೂಡ ಈಗಾಗಲೇ ಉಕ್ಕಿ ಹರಿಯಲಾರಂಭಿಸಿದೆ ಆದರೆ ಇದರ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಬಳಸಲಾಗುವುದಿಲ್ಲ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next