Advertisement

ತಾಂಡಾ ಜನರ ಅಭಿವೃದ್ದಿಗೆ ಬದ್ದ: ಭೂಸನೂರ

03:15 PM Nov 07, 2021 | Shwetha M |

ಸಿಂದಗಿ: ಉಪಚುನಾವಣೆಯಲ್ಲಿನ ನನ್ನ ಗೆಲುವು ಪಕ್ಷದ ಕಾರ್ಯಕರ್ತರಿಗೆ ಹಾಗೂ ಕ್ಷೇತ್ರದ ಮತದಾರರಿಗೆ ಅರ್ಪಿಸುತ್ತೇನೆ ಎಂದು ನೂತನ ಶಾಸಕ ರಮೇಶ ಭೂಸನೂರ ಹೇಳಿದರು.

Advertisement

ಪಟ್ಟಣದ ಸೇವಾಲಾಲ್‌ ದೇವಸ್ಥಾನದ ಆವರಣದಲ್ಲಿ ಕರ್ನಾಟಕದ ತಾಂಡಾ ಅಭಿವೃದ್ಧಿ ನಿಗಮದ 11 ಲಕ್ಷ ರೂ. ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಉಪಚುನಾವಣೆಯಲ್ಲಿ ತಾಂಡಾದ ಜನತೆ ಬಿಜೆಪಿಗೆ ಮತ ನೀಡುವ ಮೂಲಕ ನನ್ನನ್ನು ಗೆಲ್ಲಿಸಿದ್ದಿರಿ. ನಿಮ್ಮ ಋಣ ಎಂದಿಗೂ ಮರೆಯುವುದಿಲ್ಲ. ಕ್ಷೇತ್ರದಲ್ಲಿನ ತಾಂಡಾಗಳ ಅಭಿವೃದ್ಧಿಗಾಗಿ ಕರ್ನಾಟಕದ ತಾಂಡಾ ಅಭಿವೃದ್ಧಿ ನಿಗಮ ವತಿಯಿಂದ ಅಭಿವೃದ್ಧಿ ಕೆಲಸಗಳನ್ನು ಮಾಡುವ ಜೊತೆಗೆ ತಾಂಡಾ ಜನರ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಫಲಾನುಭವಿಗಳಿಗೆ ಮುಟ್ಟಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.

ಬಿಜೆಪಿ ಸಿಂದಗಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಬಯಸಿ ಎಲ್ಲ ಸಮುದಾಯದ ಜನ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರಿಗೆ ಮತ ನೀಡಿದ್ದರಿಂದ 31 ಸಾವಿರ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರು ಸಿಂದಗಿ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಇತಿಹಾಸ ದಾಖಲಿಸಿದ್ದಾರೆ. ಅವರ ಗೆಲುವಿನಲ್ಲಿ ತಾಂಡಾಗಳ ಜನರ ಶಕ್ತಿ ಅಡಗಿದೆ. ನಿಮ್ಮ ಸಹಕಾರ ಯಾವಾಗಲು ಬಿಜೆಪಿ ಮೇಲಿರಲಿ ಎಂದು ಮನವಿ ಮಾಡಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಯುವ ಮುಖಂಡ ಡಾ| ಅನಿಲ ನಾಯಕ ಮಾತನಾಡಿ, ನೂತನ ಶಾಸಕ ರಮೇಶ ಭೂಸನೂರ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಎಲ್ಲ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾರೆ. ಈ ನಿಟ್ಟಿನಲ್ಲಿ ಅವರ ಮೇಲೆ ವಿಶ್ವಾಸವಿಟ್ಟ ನಮ್ಮ ತಾಂಡಾದ ಜನರು ಅವರ ಗೆಲುವಿನಲ್ಲಿ ಹೆಚ್ಚಿನ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಿದರು.

Advertisement

ರಮೇಶ ಭೂಸನೂರ ಹಿಂದಿನ ತಮ್ಮ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಕೊರೊನಾ ಪಿಡಿತ ಕುಟುಂಬಗಳಿಗೆ ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿದ್ದಾರೆ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್‌ ವಿತರಿಸುವ ಜೊತೆಗೆ ಉಚಿತವಾಗಿ ಆಂಬ್ಯುಲೆನ್ಸ್‌ ಸೌಲಭ್ಯ ಮಾಡಿ ಜನತೆ ಸೇವೆ ಮಾಡಿದ್ದಾರೆ. ಅದರ ಪುಣ್ಯದ ಫಲವಾಗಿ ಈ ಉಪಚುನಾವಣೆಯಲ್ಲಿ ರಮೇಶ ಭೂಸನೂರ ಅವರನ್ನು ಜನತೆ ಆಶೀರ್ವದಿಸಿ ಕ್ಷೇತ್ರದ ಅಭಿವೃದ್ಧಿಗೆ ಅವರನ್ನು ಪುನಃ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.

ಈ ವೇಳೆ ನೂತನ ಶಾಸಕ ರಮೇಶ ಭೂಸನೂರ ಅವರನ್ನು ಸೇವಾಲಾಲ್‌ ಸಮಾಜದವರು, ವಿವಿಧ ಗ್ರಾಮಗಳಿಂದ ಆಗಮಿಸಿದ ಯುವಕರು ಸನ್ಮಾನಿಸಿದರು. ಸೇವಾಲಾಲ್‌ ದೇಸ್ಥಾನದ ಅರ್ಚಕ ವಸಂತ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಸೀತಾರಾಮ ನಾಯಕ, ಮಹಾದೇವ ರಾಠೊಡ, ಕೆ.ಎನ್‌. ನಾಯಕ್‌, ಹೆಮಂತ ರಾಠೊಡ, ಪಿ.ಕೆ. ನಾಯಕ, ಅಶೋಕ ನಾಯಕ, ಕೆಂಭಾವಿ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಅಶೋಕ ಜಾಧವ, ಪುಂಡಲೀಕ ರಾಠೊಡ ಸೇರಿದಂತೆ ತಳವಾರ ಸಮಾಜದ ಯುವ ಮುಖಂಡ ಭೀಮಾಶಂಕರ ಮೋರಟಗಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next