Advertisement

ತಮಿಳುನಾಡಲ್ಲಿ ಮಾ.1ರಿಂದ ಪೆಪ್ಸಿ, ಕೋಲಾ ಮಾರಾಟವಿಲ್ಲ?

03:45 AM Jan 26, 2017 | |

ಚೆನ್ನೈ: ಹಾಲಿ ವರ್ಷದ ಮಾರ್ಚ್‌ 1 ರಿಂದ ತಮಿಳುನಾಡಿನಲ್ಲಿ ಪೆಪ್ಸಿ ಮತ್ತು ಕೋಕಕೋಲಾದ ಉತ್ಪನ್ನಗಳನ್ನು ಮಾರದೇ ಇರಲು ಅಲ್ಲಿನ ವ್ಯಾಪಾರಿಗಳ ಸಂಘಟನೆ ನಿರ್ಧರಿಸಿದೆ.  ಈ ಬಗ್ಗೆ “ದ ಹಿಂದೂ’ ವರದಿ ಮಾಡಿದೆ. ರಾಜ್ಯದಲ್ಲಿ ದೇಶಿಯ ಉತ್ಪನ್ನಗಳಿಗೇ ಹೆಚ್ಚಿನ ಆದ್ಯತೆ ನೀಡಲು ಇಂಥ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಮಿಳುನಾಡು ವ್ಯಾಪಾರಿಗಳ ಒಕ್ಕೂಟ ನಿರ್ಧರಿಸಿದೆ.

Advertisement

ಸದಸ್ಯರಿಗೆ ದೇಶಿಯ ಬ್ರಾಂಡ್‌ಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಮಾರಬೇಕು ಎಂದು ಅದು ಸೂಚನೆ ನೀಡಿದೆ ಎಂದು ಪತ್ರಿಕೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಂಘದ ಅಧ್ಯಕ್ಷ  ಎ.ಎಂ.ವಿಕ್ರಮರಾಜ ಹೇಳುವ ಪ್ರಕಾರ ಮುಂದಿನ ತಿಂಗಳು ಪೂರ್ತಿ ವಿದೇಶಿ ಬ್ರಾಂಡ್‌ಗಳಿಂದ ಉಂಟಾಗುವ ಹಾನಿಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಜನಪ್ರಿಯ ವಿದೇಶಿ ಬ್ರಾಂಡ್‌ ಒಂದು ಮಕ್ಕಳಿಗೆ ಉಪಯೋಗಿಸಲು ಯೋಗ್ಯವಲ್ಲ ಎಂಬ ಬಗ್ಗೆ ಕಂಪನಿಯೇ ಒಪ್ಪಿಕೊಂಡಿತ್ತು ಎಂದು ವಿಕ್ರಮರಾಜ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next