ನವದೆಹಲಿ: ಉದ್ಯಮ ಪುನಾರಚನೆಯ ಹೆಸರಲ್ಲಿ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಿದ ಬೈಜೂಸ್ ಕಂಪನಿ, ಶುಕ್ರವಾರ ಫುಟ್ಬಾಲ್ ಸ್ಟಾರ್ ಲಯೋನೆಲ್ ಮೆಸ್ಸಿ ಅವರನ್ನು ತನ್ನ ಜಾಗತಿಕ ಬ್ರ್ಯಾಂಡ್ ರಾಯಭಾರಿಯನ್ನಾಗಿ ನೇಮಕ ಮಾಡಿದೆ.
ಆದರೆ, ಕಂಪನಿಯ ಈ ನಡೆಗೆ ಭಾರೀ ಆಕ್ಷೇಪ, ವಿರೋಧ ವ್ಯಕ್ತವಾಗಿದೆ.ಒಂದು ಕಡೆ ಒತ್ತಾಯಪೂರ್ವಕವಾಗಿ ರಾಜೀನಾಮೆ ಪತ್ರಗಳಿಗೆ ಉದ್ಯೋಗಿಗಳಿಂದ ಸಹಿ ಹಾಕಿಸಿ, ವಜಾ ಮಾಡಲಾಗುತ್ತದೆ. ಮತ್ತೂಂದು ಕಡೆ ಮೆಸ್ಸಿಯಂಥ ಐಕಾನ್‌ಗಳನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗುತ್ತದೆ. ಇದು ಸರಿಯಾದ ಕ್ರಮವಲ್ಲ ಎಂದು ಅನೇಕರು ಕಿಡಿಕಾರಿದ್ದಾರೆ. ಬೈಜೂಸ್ ನಮ್ಮನ್ನು ರೊಬೋಟ್‌ನಂತೆ ನಡೆಸಿಕೊಂಡಿದೆ ಎಂದು ಕೆಲ ಉದ್ಯೋಗಿಗಳು ಜರೆದಿದ್ದಾರೆ.
ಅತ್ಯಂತ ವೇಗವಾಗಿ ಬೆಳೆದರೆ, ಎಲ್ಲರೂ ಈ ರೀತಿ ಬೆಲೆ ತೆರಬೇಕಾಗುತ್ತದೆ. ಕಂಪನಿಯಲ್ಲಿ ಹಣ ಇಲ್ಲ ಎಂದರ್ಥವಲ್ಲ, ಬದಲಿಗೆ ಬೇಗನೆ ಬೆಳೆದಷ್ಟು ಕಂಪನಿಯಲ್ಲಿ ಅಗತ್ಯಕ್ಕಿಂತ ಅನಗತ್ಯವಾದದ್ದೇ ಹೆಚ್ಚಾಗುತ್ತದೆ. ಅದನ್ನೆಲ್ಲ ಮೊದಲೇ ಸರಿಪಡಿಸಿಕೊಳ್ಳಬೇಕು ಎಂದು ಕ್ರಿಕ್ ಹೀರೋಸ್ ಸ್ಥಾಪಕ ಅಭಿಷೇಕ್ ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ 2,500 ಮಂದಿಯನ್ನು ವಜಾ ಮಾಡಿದ್ದ ಬೈಜೂಸ್, 2022-23ರ ವಿತ್ತ ವರ್ಷದಲ್ಲಿ ಲಾಭ ಗಳಿಸುವ ಉದ್ದೇಶ ಹೊಂದಿರುವುದಾಗಿ ಹೇಳಿತ್ತು.