ಚೆನ್ನೈ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, “ಪೇ ಸಿಎಂ’ ಮೂಲಕ ಬಿಜೆಪಿ ವಿರುದ್ಧ ದೊಡ್ಡ ಮಟ್ಟದ ಅಭಿಯಾನ ನಡೆಸಿತ್ತು. ಈಗ ಅದೇ ಮಾದ ರಿ ಯ ಲ್ಲಿ ಪ್ರಧಾನಿ ಮೋದಿ ವಿರುದ್ಧ ಡಿಎಂಕೆ, ಮೋದಿ ಮುಖವುಳ್ಳ “ಜಿ-ಪೇ’ ಭಿತ್ತಿಪತ್ರಗಳನ್ನು ತಮಿಳುನಾಡಿನ ಎಲ್ಲ ಕಡೆ ಅಂಟಿಸಿದೆ!
“ಪೋಸ್ಟರ್‌ನಲ್ಲಿರುವ ಕ್ಯುಆ ರ್ ಕೋಡ್ ಸ್ಕ್ಯಾನ್ ಮಾಡಿ ಮತ್ತು ಹಗರಣಗಳ ಬಗ್ಗೆ ತಿಳಿಯಿರಿ’ ಎಂದು ಅದ ರ ಲ್ಲಿ ಬರೆಯಲಾಗಿದೆ. ಅದರಲ್ಲಿರುವ ಕೋಡ್ ಸ್ಕ್ಯಾನ್ ಮಾಡಿದಾಗ ವೀಡಿಯೋವೊಂದು ಕಾಣಿಸಿಕೊಂಡು, ಚುನಾವಣ ಬಾಂಡ್‌ಗಳ ಮಾಹಿತಿ ದೊರೆಯುತ್ತದೆ ಮತ್ತು ಇದು ಬಿಜೆಪಿಯ ಹಗರಣ ಎಂದು ಡಿಎಂಕೆ ವಾದಿಸುತ್ತದೆ.
ಬುಧವಾರ ತಮಿಳುನಾಡಿನಲ್ಲಿ ಪ್ರಚಾರ ನಡೆಸಿದ್ದ ಪ್ರಧಾನಿ ಮೋದಿ ಅವರು, ಡಿಎಂಕೆ ಮತ್ತು ಕಾಂಗ್ರೆಸ್ ವಿರುದ್ದ ತೀವ್ರ ಹರಿಹಾಯ್ದಿದ್ದರು. ಭ್ರಷ್ಟಾಚಾರದ ಕಾಪಿ ರೈಟ್ ಡಿಎಂಕೆ ಹೊಂದಿದ್ದು, ಇದರಲ್ಲಿ ಏಕಸ್ವಾಮ್ಯ ಸಾಧಿಸಿದೆ ಎಂದು ಪ್ರಧಾನಿ ಮೋದಿ ವಾಗ್ಧಾಳಿ ನಡೆಸಿದ್ದರು. ಮಾರನೇ ದಿನವೇ ಈ ಪೋಸ್ಟರ್‌ಗಳು ತಮಿಳುನಾಡಿನಾದ್ಯಂತ ಕಾಣಿಸಿಕೊಂಡಿವೆ.
ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳಿಗೆ ಎ.19ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದು, ಚುನಾವಣ ಪ್ರಚಾರ ಕಾವು ಪಡೆದುಕೊಂಡಿದೆ.
ಒಂದು ವೇಳೆ ಭ್ರಷ್ಟಾಚಾರಕ್ಕೆಂದೇ ವಿವಿ ಸ್ಥಾಪನೆ ಮಾಡಿದರೆ, ಅದರ ಕುಲಪತಿ ಸ್ಥಾನಕ್ಕೆ ಪ್ರಧಾನಿ ಮೋದಿಯೇ ಅತ್ಯಂತ ಸೂಕ್ತ ವ್ಯಕ್ತಿ. ಚುನಾವಣ ಬಾಂಡ್, ಪಿಎಂ ಕೇರ್ ನಿಧಿ ಹಾಗೂ ಕಳಂಕಿತ ಭ್ರಷ್ಟರನ್ನು ಸ್ವತ್ಛಗೊಳಿಸುವ “ಬಿಜೆಪಿ ವಾಷಿಂಗ್ ಮೆಷೀನ್’ಗಳೇ ಇದನ್ನು ಸಾರಿ ಸಾರಿ ಹೇಳುತ್ತವೆ.
ಎಂ.ಕೆ.ಸ್ಟಾಲಿನ್,ತಮಿಳುನಾಡು ಮುಖ್ಯಮಂತ್ರಿ