Advertisement

ಲವ್‌ಮಾಕ್ಟೇಲ್‌ ರೀಮೇಕ್‌ನಲ್ಲಿ ತಮನ್ನಾ

08:46 AM Jul 17, 2020 | mahesh |

ಈ ವರ್ಷದ ಆರಂಭದಲ್ಲಿ ಕನ್ನಡದಲ್ಲಿ “ಲವ್‌ ಮಾಕ್ಟೇಲ್‌’ ಚಿತ್ರ ತೆರೆಗೆ ಬಂದಿದ್ದು ನಿಮಗೆ ಗೊತ್ತಿರಬಹುದು. ಮದರಂಗಿ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಜೋಡಿಯಾಗಿ ಅಭಿನಯಿಸಿದ್ದ ಈ ಚಿತ್ರ ವರ್ಷದ ಆರಂಭದಲ್ಲಿಯೇ ಬಾಕ್ಸಾಫಿಸ್‌ನಲ್ಲಿ ಸಾಕಷ್ಟು ಸದ್ದು ಮಾಡಿ ಸುದ್ದಿಯಾಗಿತ್ತು. ಅದಾದ ಬಳಿಕ “ಲವ್‌ ಮಾಕ್ಟೇಲ್‌’ ಚಿತ್ರವನ್ನು ನೋಡಿದ ಪರಭಾಷೆಯ ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಮತ್ತು ಪ್ರೇಕ್ಷಕರು ಕೂಡ ಚಿತ್ರದ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಅದಾದ ಬಳಿಕ “ಲವ್‌ ಮಾಕ್ಟೇಲ್‌’ ಬೇರೆ ಬೇರೆ ಭಾಷೆಗಳಿಗೆ ರಿಮೇಕ್‌ ಆಗಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಜೋರಾಗಿ ಹರಿದಾಡಲು ಶುರುವಾಗಿತ್ತು. ಅದಾದ ಬಳಿಕ “ಲವ್‌ ಮಾಕ್ಟೇಲ್’ ಕೋವಿಡ್ ಲಾಕ್‌ಡೌನ್‌ನಿಂದಾಗಿ ಚಿತ್ರ ಒಟಿಟಿ ಪ್ಲ್ರಾಟ್‌ಫಾರಂನಲ್ಲಿ ಬಿಡುಗಡೆಯಾಗಿ ಆನ್‌ಲೈನ್‌ ಮತ್ತು ಸೋಶಿಯಲ್‌ ಮೀಡಿಯಾಗಳಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

Advertisement

ಇದೀಗ “ಲವ್‌ ಮಾಕ್ಟೇಲ್‌’ ತೆಲುಗಿನಲ್ಲಿ ರಿಮೇಕ್‌ ಆಗುತ್ತಿದ್ದು, ಚಿತ್ರದ ರಿಮೇಕ್‌ ಹಕ್ಕುಗಳು ಈಗಾಗಲೇ ಮಾರಾಟವಾಗಿವೆ. ಇನ್ನು ತೆಲುಗಿನಲ್ಲೂ ಈ ಚಿತ್ರ “ಲವ್‌ ಮಾಕ್ಟೇಲ್‌’ ಎನ್ನುವ ಹೆಸರಿನಲ್ಲಿ ತೆರೆಗೆ ಬರುತ್ತಿದ್ದು, ಚಿತ್ರವನ್ನು ನಾಗಶೇಖರ್‌ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿದೆ. “ಲವ್‌ ಮಾಕ್ಟೇಲ್‌’ ಚಿತ್ರದಲ್ಲಿ ಬರುವ ನಿಧಿಮಾ ಪಾತ್ರವನ್ನು ತಮನ್ನಾ ಮಾಡಲಿದ್ದಾರೆ. ಹಾಗೇ ಚಿತ್ರದಲ್ಲಿ ಬರುವ ಕೃಷ್ಣನ ಪಾತ್ರದಲ್ಲಿ ಸತ್ಯದೇವ್‌ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾ ಡುತ್ತಿದೆ. ಈ ಚಿತ್ರಕ್ಕೆ ಸತ್ಯ ಹೆಗಡೆ ಕ್ಯಾಮೆರಾ ಕೆಲಸ ನಿರ್ವಹಿಸುತ್ತಿದ್ದು, ತೆಲುಗಿನಲ್ಲಿ ಭಾವನಾ ರವಿ ಮತ್ತು ನಾಗಶೇಖರ್‌ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ “ಲವ್‌ ಮಾಕ್ಟೇಲ್‌’ ತೆಲುಗು ರಿಮೇಕ್‌ ಬಗ್ಗೆ ಒಂದಷ್ಟು ಸುದ್ದಿಗಳು ಹರಿದಾಡುತ್ತಿದ್ದು, ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಅಧಿಕೃತವಾಗಿ ಹೊರಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next