Advertisement
ಒಟ್ಟು 12 ತಂಡಗಳನ್ನೊಳಗೊಂಡ 11ನೇ ಆವೃತ್ತಿಯ ಆರಂಭಿಕ ಹಂತದ ಪಂದ್ಯಗಳು ಅ. 18ರಿಂದ ಹೈದರಾಬಾದ್‌ನ ಗಚಿಬೌಲಿ ಮೈದಾನದಲ್ಲಿ ನಡೆದರೆ, 2ನೇ ಹಂತದ ಸ್ಪರ್ಧೆಗಳು ನ. 10ರಿಂದ ನೋಯ್ಡಾದ ವಿಜಯ್ ಸಿಂಗ್ ಮೈದಾನದಲ್ಲಿ, 3ನೇ ಹಂತದ ಪಂದ್ಯಗಳು ಡಿ. 3ರಿಂದ ಪುಣೆಯ ಛತ್ರಪತಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಪಿಕೆಎಲ್ 11ನೇ ಆವೃತ್ತಿಯಲ್ಲಿ ಪ್ಲೇ ಆಫ್ ಮತ್ತು ಫೈನಲ್ ಸೇರಿ ಒಟ್ಟು 137 ಪಂದ್ಯಗಳನ್ನು ಆಡಲಾಗುವುದು.
ಮೊದಲ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ಮತ್ತು ಬೆಂಗಳೂರು ಬುಲ್ಸ್ ತಂಡಗಳು ಕಣಕ್ಕಿಳಿಯಲಿವೆ. ಟೈಟಾನ್ಸ್‌ನಲ್ಲಿ ತಾರಾ ಆಟಗಾರ ಪವನ್ ಕುಮಾರ್ ಶೆಹ್ರಾವತ್, ಬುಲ್ಸ್‌ನಲ್ಲಿ ರೆಕಾರ್ಡ್ ಬ್ರೇಕರ್ ಪ್ರದೀಪ್ ನರ್ವಾಲ್ ಇರುವುದರಿಂದ ಆರಂಭಿಕ ಪಂದ್ಯವೇ ಕುತೂಹಲ ಮೂಡಿಸಿದೆ.
ಕಳೆದ ಸೀಸನ್‌ನಲ್ಲಿ ಬೆಂಗಳೂರು 8ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿತ್ತು. ತೆಲುಗು ಟೈಟಾನ್ಸ್ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಇತ್ತಂಡಗಳ ಈವರೆಗಿನ 23 ಮುಖಾಮುಖೀ ಗಳಲ್ಲಿ ಬೆಂಗಳೂರು 16ರಲ್ಲಿ ಜಯಿಸಿದ್ದರೆ, ಟೈಟಾನ್ಸ್ ಕೇವಲ 3ರಲ್ಲಿ ಮೇಲುಗೈ ಸಾಧಿಸಿದೆ. 4 ಪಂದ್ಯಗಳು ಟೈ ಆಗಿವೆ. 3 ಕೋಟಿ ರೂ. ಬಹುಮಾನ
ಪ್ರೊ ಕಬಡ್ಡಿ ಲೀಗ್ ವಿಜೇತರಿಗೆ 3 ಕೋಟಿ ರೂ. ಬಹುಮಾನ ಸಿಗಲಿದೆ. ರನ್ನರ್ ಅಪ್ ತಂಡಕ್ಕೆ 1.80 ಕೋಟಿ ರೂ. ಮೊತ್ತ ಲಭಿಸಲಿದೆ.