Advertisement
ಮಾ. 2 ಮತ್ತು 3ರಂದು ಜರುಗಲಿರುವ ಬಣ್ಣದ ಓಕಳಿಗಾಗಿ ಬಣ್ಣದಂಗಡಿಗಳ ಮುಂದೆ ಸಾಲು ನಿಂತು ಬಣ್ಣ ಖರೀದಿಸಿದರು. ಬಣ್ಣದೊಕಳಿ ಆಡಲು ಪಿಚಕಾರಿಗಳು ಖರೀದಿಸಲು ಅಂಗಡಿಗಳ ಮುಂದೆ ಜಮಾಯಿಸಿದ್ದರು.
ದಾರಿಯುದ್ದಕ್ಕೂ ಮೆರವಣಿಗೆ ಮಾಡುತ್ತ ಸಾಗಿದ್ದರೆ ಇನ್ನೊಬ್ಬ ವ್ಯಕ್ತಿಯು ಆ ವ್ಯಕ್ತಿಯ ಹಿಂದಿನ ಕಥೆಯನ್ನು ನೆನಪಿಸಿ ನಾಟಕೀಯ ರೂಪದಲ್ಲಿ ಹಾಡ್ಯಾಡಿ ಹಳ್ಳುವ ದೃಶ್ಯಗಳು ಜನರ ನಕ್ಕ ನಲುವಿಗೆ ಸಾಕ್ಷಿಯಾಯಿತು. ಬಣ್ಣದ ಆಟದಲ್ಲಿ ಕಲರ್ ಫುಲ್ ಬಣ್ಣದ ಜೊತೆ ಕೆಮಿಕಲ್ ಮಿಶ್ರಿತ ಬಣ್ಣ ಉಪಯೋಗಿಸುವುದು ಸಾಮಾನ್ಯ. ಇದರಿಂದ ಕಣ್ಣಿಗೆ ಹಾಗೂ ಚರ್ಮಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಕೆಲವು ಯುವಕರು ಮುರ್‍ನಾಲ್ಕು ದಿನದವರೆಗೆ ಗೋವಾ, ಮುಂಬೈ, ಪುಣೆ, ಧರ್ಮಸ್ಥಳ, ಶೃಂಗೇರಿ, ಮೂಡಬಿದ್ರೆ, ಹೊರನಾಡು ಸೇರಿದಂತೆ ಮುಂತಾದ ಪ್ರವಾಸಿ ತಾಣಗಳ ಕಡೆಗೆ ಪ್ರವಾಸಕ್ಕೆ ತೆರಳಿದ್ದಾರೆ. ಇನ್ನೂ ಕೆಲವು ಯುವಕರು ಹೋಳಿ ಹುಣ್ಣಿವೆ ರಂಗಿನಾಟದ ನೆಪದಲ್ಲಿ ಮಜಾ ಉಡಾಯಿಸಲು ಬೀಚ್‌ಗಳತ್ತ ತೆರಳಿದ್ದಾರೆ.