Advertisement

Afghanistan; ತಾಲಿಬಾನ್ ನಿಂದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಇಬ್ಬರಿಗೆ ಮರಣದಂಡನೆ

06:41 PM Feb 22, 2024 | Team Udayavani |

ಘಜ್ನಿ(ಅಫ್ಘಾನಿಸ್ಥಾನ): ತಾಲಿಬಾನ್ ಅಧಿಕಾರಿಗಳು ಗುರುವಾರ ಪೂರ್ವ ಅಫ್ಘಾನಿಸ್ಥಾನದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಕೊಲೆ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೊಳಗಾದ ಇಬ್ಬರನ್ನು ಸಾರ್ವಜನಿಕವಾಗಿ ಗುಂಡಿನ ಮಳೆ ಸುರಿಸಿ ಹತ್ಯೆ ಗೈದಿದ್ದಾರೆ.

Advertisement

ತಾಲಿಬಾನ್ ಸುಪ್ರೀಂ ಲೀಡರ್ ಹಿಬತುಲ್ಲಾ ಅಖುಂದ್ಜಾದಾ ಸಹಿ ಮಾಡಿದ ಡೆತ್ ವಾರಂಟ್ ಅನ್ನು ಸುಪ್ರೀಂ ಕೋರ್ಟ್ ಅಧಿಕಾರಿ ಅತೀಕುಲ್ಲಾ ದರ್ವಿಶ್ ಗಟ್ಟಿಯಾಗಿ ಓದಿದ ನಂತರ ಘಜ್ನಿ ನಗರದಲ್ಲಿ ಇಬ್ಬರ ಮೇಲೆ ಅನೇಕ ಬಾರಿ ಗುಂಡಿನ ದಾಳಿ ನಡೆಸಿ ಹತ್ಯೆಗೈಯಲಾಗಿದೆ.

“ಇಬ್ಬರು ಕೊಲೆಯ ಅಪರಾಧಕ್ಕೆ ಶಿಕ್ಷೆಗೊಳಗಾದವರಾಗಿದ್ದು, ದೇಶದ ನ್ಯಾಯಾಲಯಗಳಲ್ಲಿ ಎರಡು ವರ್ಷಗಳ ವಿಚಾರಣೆಯ ನಂತರ, ಆದೇಶಕ್ಕೆ ಸಹಿ ಹಾಕಲಾಗಿದೆ” ಎಂದು ದರ್ವಿಶ್ ಹೇಳಿದ್ದಾರೆ. ಮರಣದಂಡನೆ ಶಿಕ್ಷೆಗೆ ಸಾಕ್ಷಿಯಾಗಲು ಸಾವಿರಾರು ಪುರುಷರು ಕ್ರೀಡಾಂಗಣದಲ್ಲಿ ಜಮಾಯಿಸಿದ್ದರು. ಶಿಕ್ಷೆಗೊಳಗಾದ ಪುರುಷರ ಕುಟುಂಬ ಸದಸ್ಯರೂ ಹಾಜರಾಗಿ, ಕೊನೆಯ ಕ್ಷಣದಲ್ಲಿ ಶಿಕ್ಷೆ ಬದಲಾಯಿಸುತ್ತೀರಾ ಎಂದುಅಂಗಲಾಚಿದರೂ ಎರಡೂ ಪ್ರಕರಣಗಳಲ್ಲಿ ನಿರ್ಧಾರ ಬದಲಾಯಿಸಲು ತಾಲಿಬಾನ್ ನಿರಾಕರಿಸಿದೆ.

2021 ರಲ್ಲಿ ತಾಲಿಬಾನ್  ಅಧಿಕಾರ ವಹಿಸಿಕೊಂಡ ನಂತರ ಇಸ್ಲಾಂ ಧರ್ಮದ ಕಠಿಣ ವ್ಯಾಖ್ಯಾನವನ್ನು ವಿಧಿಸಿದೆ. “ಕಿಸಾಸ್” ಎಂದು ಕರೆಯಲ್ಪಡುವ “ಕಣ್ಣಿಗೆ ಕಣ್ಣು” ಶಿಕ್ಷೆಗಳನ್ನು ಒಳಗೊಂಡಂತೆ ಇಸ್ಲಾಮಿಕ್ ಕಾನೂನಿನ ಎಲ್ಲಾ ಅಂಶಗಳನ್ನು ಸಂಪೂರ್ಣವಾಗಿ ಜಾರಿಗೆ ತರಲು 2022 ರಲ್ಲಿ ಅಖುಂಡ್ಜಾಡಾ ನ್ಯಾಯಾಧೀಶರಿಗೆ ಆದೇಶಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next