ಕಾಬೂಲ್: ಇಸ್ಲಾಂ ಪವಿತ್ರ ಗ್ರಂಥ ಕುರಾನ್ ಗೆ ಅಗೌರವ ತೋರಿಸಿದ್ದಾರೆ ಎಂದು ಆರೋಪಿಸಿ ಪ್ರಸಿದ್ಧ ಅಫ್ಘಾನ್ ಫ್ಯಾಷನ್ ಮಾಡೆಲ್ ಮತ್ತು ಅವರ ಮೂವರು ಸಹೋದ್ಯೋಗಿಗಳನ್ನು ತಾಲಿಬಾನ್ ಬಂಧಿಸಿದೆ.
ಫ್ಯಾಶನ್ ಶೋಗಳು, ಯೂಟ್ಯೂಬ್ ಕ್ಲಿಪ್‌ಗಳು ಮತ್ತು ಮಾಡೆಲಿಂಗ್ ಈವೆಂಟ್‌ಗಳಿಗೆ ಹೆಸರುವಾಸಿಯಾದ ಅಜ್ಮಲ್ ಹಖಿಕಿ ಅವರನ್ನು ತಾಲಿಬಾನ್ ಬಂಧಿಸಿದೆ. ಈ ಬಗೆಗಿನ ವಿಡಿಯೋವೊಂದನ್ನು ತಾಲಿಬಾನ್ ಗುಪ್ತಚರ ಸಂಸ್ಥೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.
ಅಜ್ಮಲ್ ಹಖಿಕಿ ಹಾಸ್ಯದ ರೀತಿಯಲ್ಲಿ ಕುರಾನ್ ನ ಪದ್ಯಗಳನ್ನು ಅರೇಬಿಕ್‌ನಲ್ಲಿ ಪಠಿಸಿದ ವಿಡಿಯೋ ವೈರಲ್ ಆಗಿತ್ತು.
ಬಂಧನದ ನಂತರ, ತಾಲಿಬಾನ್ ಹಖಿಕಿ ಮತ್ತು ಅವರ ಸಹೋದ್ಯೋಗಿಗಳ ವೀಡಿಯೊವನ್ನು ಬಿಡುಗಡೆ ಮಾಡಿದೆ. ಜೈಲು ಸಮವಸ್ತ್ರದಲ್ಲಿ ನಿಂತು ತಾಲಿಬಾನ್ ಸರ್ಕಾರ ಮತ್ತು ಧಾರ್ಮಿಕ ವಿದ್ವಾಂಸರಲ್ಲಿ ಹಖಿಕಿ ಕ್ಷಮೆಯಾಚಿಸಿದರು.
ಇದನ್ನೂ ಓದಿ:ಕೊಂಕಣ ರೈಲ್ವೆ: ಮುಂಗಾರು ವೇಳಾಪಟ್ಟಿ ಜೂ. 10ರಿಂದ ಅನ್ವಯ
“ಕುರಾನ್ ಪದ್ಯಗಳನ್ನು ಅಥವಾ ಪ್ರವಾದಿ ಮುಹಮ್ಮದ್ ಅವರ ಮಾತುಗಳನ್ನು ಅವಮಾನಿಸಲು ಯಾರಿಗೂ ಅವಕಾಶವಿಲ್ಲ.” ಎಂದು ಬರೆದು ಈ ವಿಡಯೋ ಪೋಸ್ಟ್ ಮಾಡಲಾಗಿದೆ.