Advertisement

ಪ್ರತಿಭೆ-ಕಲೆ ಯಾರ ಸ್ವತ್ತಲ್ಲ: ಮಂಜುನಾಥ

05:37 PM May 03, 2022 | Shwetha M |

ವಿಜಯಪುರ: ಕಲೆ ಯಾರ ಸ್ವತ್ತಲ್ಲ, ಅದು ಯಾರಿಗೆ ಬೇಕಾದರು ಒಲಿಯುತ್ತದೆ. ಕಲೆ ಮೇಲೆ ನಮಗೆ ಶ್ರದ್ಧೆ ಇರಬೇಕು ಎಂದು ಎಕ್ಸ್‌ಲೆಂಟ್‌ ಶಿಕ್ಷಣ ಸಂಸ್ಥೆ ನಿರ್ದೇಶಕ ಮಂಜುನಾಥ ಕೌಲಗಿ ಹೇಳಿದರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯದ ಅಡಿಯಲ್ಲಿ ಉದೇಶ ಗುಜರಿ ಅವರ ಏಕವ್ಯಕ್ತಿ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ, ಸಂಘ-ಸಂಸ್ಥೆಗಳು ಬಡ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವಂತಹ ಕಾರ್ಯ ಕೈಗೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಕಲಾವಿದ ಮಲ್ಲಿಕಾರ್ಜುನ ಕನ್ನೂರ ಮಾತನಾಡಿ, ಕಲೆ ಎಲ್ಲರನ್ನು ಆಕರ್ಷಿಸುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ. ಆಟೋ ಚಾಲಕನ ಕಲಾಪ್ರತಿಭೆಯನ್ನು ಗುರುತಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉದೇಶ ಗುಜರಿ ಅವರನ್ನು ಪ್ರೋತ್ಸಾಹಿಸಿರುವುದು ಹರ್ಷವನ್ನುಂಟು ಮಾಡಿದೆ ಎಂದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಪೊನ್ನಪ್ಪ ಕಡೇಮನಿ ಮಾತನಾಡಿ, ಕ್ರಿಯಾತ್ಮಕ ಮತ್ತು ಕೌಶಲ್ಯ ಹೊಂದಿದ ಚಿತ್ರಕಲೆ, ಆಧುನಿಕ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಭಾವಂತ ಕಲಾವಿದರು ಸಾಕಷ್ಟಿದ್ದಾರೆ. ಅವರಿಗೆ ಉದ್ಯೋಗ ದೊರಕುತ್ತಿಲ್ಲ. ಭವಿಷ್ಯ ಕಟ್ಟಿಕೊಳ್ಳಲು ತೊಂದರೆ ಅನುಭವಿಸುತ್ತಿದ್ದಾರೆ. ಚಿತ್ರಕಲಾ ಪದವೀಧರರು ಖಾಸಗಿಯಾಗಿ ದುಡಿಮೆ ಮಾಡುವ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಚಿತ್ರಕಲೆ ಉಳಿದರೆ ಮಾನವೀಯತೆ ಹಾಗೂ ನೈತಿಕತೆ ಉಳಿಯುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ವಿದ್ಯೆ ಜೊತೆಗೆ ಚಿತ್ರಕಲೆಯನ್ನು ರೂಢಿಸಿಕೊಳ್ಳುವ ಅವಶ್ಯಕತೆ ಇದೆ. ಸರಕಾರ ಚಿತ್ರಕಲಾ ಶಿಕ್ಷಕರನ್ನು ನೇಮಿಸಿಕೊಳ್ಳದೆ ಚಿತ್ರಕಲಾ ಪದವೀಧರರಿಗೆ ಅನ್ಯಾಯ ಮಾಡಿದೆ. ಆದ್ದರಿಂದ ಚಿತ್ರಕಲೆ ಕಡೆಗೆ ಯಾರೂ ಆಕರ್ಷಿತರಾಗುತ್ತಿಲ್ಲ. ಚಿತ್ರಕಲೆ ಎಲ್ಲ ಕಾಲದಲ್ಲಿಯೂ ಸಲ್ಲುವಂತಹದ್ದು, ಮಕ್ಕಳ ಮೊದಲ ಭಾಷೆ ಚಿತ್ರಕಲೆ ಎಂಬುದು ಸತ್ಯ ಸಂಗತಿ ಎಂದರು.

Advertisement

ಎ.ಆರ್‌.ಜಿ. ಇಂಟರನ್ಯಾಷನಲ್‌ ದಿ ಫ್ಯೂಚರಿಸ್ಟಿಕ್‌ ಸ್ಕೂಲ್‌ ಸಂಸ್ಥಾಪಕ ಪ್ರದೀಪ ಜೈನ್‌, ಶಾರದಾ ಗುಜರಿ, ಜಿ.ಎಸ್‌. ಭೂಸಗೊಂಡ, ವಿ.ವಿ. ಹಿರೇಮಠ, ರಮೇಶ ಚವ್ಹಾಣ, ವಿದ್ಯಾಧರ ಸಾಲಿ, ಅಯಾಜ್‌ ಪಟೇಲ್‌, ಮುಸ್ತಾಕ್‌ ತಿಕೋಟಾ, ಶಿವಾನಂದ ಅಥಣಿ, ಗಿರಿಜಾ ಪಾಟೀಲ, ಶ್ರದ್ದಾ ಗಡೇಕರ ಇದ್ದರು. ಶಬ್ಬಿರ್‌ ನದಾಫ್‌ ನಿರೂಪಿಸಿದರು. ಅಶ್ವಿ‌ನಿ ಗುಜರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next