Advertisement

ತಲಮಾರಿ ಗ್ರಾಮ ಸೀಲ್‌ಡೌನ್‌-ಜಿಲ್ಲಾಧಿಕಾರಿ ಭೇಟಿ

02:37 PM Aug 01, 2020 | Suhan S |

ರಾಯಚೂರು: ತಾಲೂಕಿನ ತಲಮಾರಿ ಗ್ರಾಮದಲ್ಲಿ 70 ಕೋವಿಡ್ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟ ಕಾರಣ ಶುಕ್ರವಾರದಿಂದ 15 ದಿನ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಯಿತು.

Advertisement

ಗ್ರಾಮಕ್ಕೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು. ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲಾಯಿತು. ತಲಮಾರಿ ಗ್ರಾಮಕ್ಕೆ ಬೇರೆ ಗ್ರಾಮಗಳ ಜನ ಪ್ರವೇಶಿಸದಂತೆ ತಡೆಯಬೇಕು. ಅದರಂತೆ ಗ್ರಾಮಸ್ಥರು ಹೊರ ಹೋಗದಂತೆ ತಿಳಿ ಹೇಳಲಾಯಿತು. ಕೃಷಿ ಚಟುವಟಿಕೆ ಬಿಟ್ಟು ಇನ್ನಿತರ ಚಟುವಟಿಕೆಗಳನ್ನು ಸಂಪೂರ್ಣ ನಿರ್ಬಂಧಿ ಸಬೇಕು ಎಂದು ಡಿಸಿ ಸೂಚಿಸಿದರು.

ಆಂಧ್ರಪ್ರದೇಶದ ಗಡಿ ಗ್ರಾಮವಾಗಿರುವ ಐಜ್‌ ಗ್ರಾಮದ ಪ್ರವೇಶ ನಿರ್ಬಂಧಿಸಬೇಕು. ತಲಮಾರಿ ಗ್ರಾಮದಲ್ಲಿ ಶೇ.100 ಬ್ಯಾರಿಕೇಡ್‌ ಅಳವಡಿಸಬೇಕು. ಕೋವಿಡ್‌-19 ಹೆಚ್ಚು ದೃಢಪಟ್ಟಿರುವ ಮನೆಗಳ ಅಕ್ಕಪಕ್ಕದಲ್ಲಿ ಕಟ್ಟಿಗೆ ಬಳಸಿ ತಡೆ ಒಡ್ಡಬೇಕು. ಒಟ್ಟಾರೆ ಓಡಾಟ ಸಂಪೂರ್ಣ ನಿರ್ಬಂ ಧಿಸಬೇಕು. ಕೃಷಿ ಯಂತ್ರೋಪಕರಣಗಳನ್ನು ಗ್ರಾಮದ ಹೊರಗಡೆ ಅಥವಾ ಕೃಷಿ ಜಮೀನಿನ ಬಳಿಯೇ ಇರಿಸಬೇಕು. ಅತ್ಯಂತ ತುರ್ತು ಅಥವಾ ಅನಿವಾರ್ಯವಿದ್ದಲ್ಲಿ ಮಾತ್ರ ಜನ ಓಡಾಡಬೇಕು. ಅದರಲ್ಲೂ ಪಾಸಿಟಿವ್‌ ಪ್ರಕರಣ ವರದಿಯಾದ ಮನೆಯವರು ಹೊರಗೆ ಬರಲೇಬೇಡಿ ಎಂದು ಸೂಚಿಸಲಾಯಿತು.

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಲ್ಲಿ ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ, ಮೈ-ಕೈ ನೋವು ಹಾಗೂ ತಲೆ ನೋವು ಕಂಡುಬಂದಲ್ಲಿ ರ್ಯಾಪಿಡ್‌ ಆಂಟಿಜೆನ್‌ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು. ಅದಕ್ಕಾಗಿ ಸಂಚಾರಿ ವಾಹನ ಬಳಸಿಕೊಳ್ಳಿ, ಅದಕ್ಕೆ ಅಗತ್ಯ ಇರುವ 500 ಕ್ಕೂ ಅಧಿಕ ಕಿಟ್‌ಗಳನ್ನು ಒದಗಿಸುವಂತೆ ಆರೋಗ್ಯಾಧಿಕಾರಿಗೆ ತಿಳಿಸಿದರು.

ತಲಮಾರಿ ಗ್ರಾಮದಲ್ಲಿ 16 ಕಂಟೈನ್‌ಮೆಂಟ್‌ ವಲಯಗಳನ್ನಾಗಿ ರಚಿಸಲಾಯಿತು. ಸಹಾಯಕ ಆಯುಕ್ತ ಸಂತೋಷ ಕಾಮನಗೌಡರ್‌, ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾ ಧಿಕಾರಿ ಹರಿಬಾಬು, ತಹಶೀಲ್ದಾರ್‌ ಡಾ.ಹಂಪಣ್ಣ ಸಜ್ಜನ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಶಕೀರ್‌ ಸೇರಿದಂತೆ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next