Advertisement

ಕೋವಿಡ್‌ ಮುಕ್ತ ಹಳ್ಳಿಗೆ ಕ್ರಮ ವಹಿಸಿ

05:25 PM May 30, 2021 | Team Udayavani |

ಬೀದರ: ಕೋವಿಡ್‌ ಸೋಂಕಿನ ಕೇವಲ ಪ್ರಕರಣಗಳು ಇರುವ ಹಳ್ಳಿಗಳನ್ನಷ್ಟೇ ಅಲ್ಲದೇ, ಪ್ರಕರಣಗಳು ದೃಢಪಟ್ಟಿರದ ಹಳ್ಳಿಗಳತ್ತಲೂ ಹೆಚ್ಚಿನ ಗಮನ ಕೊಡಬೇಕು. ಅಲ್ಲಿ ಒಂದೇ ಒಂದು ಕೋವಿಡ್‌ ಪಾಜಿಟಿವ್‌ ಕೇಸುಗಳು ಬಾರದಂತೆ ಹೆಚ್ಚಿನ ರೀತಿಯಲ್ಲಿ ಜನಜಾಗೃತಿ ಕಾರ್ಯಕ್ರಮ ರೂಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ರಿಚರ್ಡ್‌ ವಿನ್ಸೆಂಟ್‌ ಡಿಸೋಜಾ ಸೂಚಿಸಿದರು.

Advertisement

ನಗರದ ಡಿಸಿ ಕಚೇರಿ ವಿಡಿಯೋ ಸಭಾಂಗಣದಲ್ಲಿ ನಡೆದ ಕೋವಿಡ್‌-19 ನಿರ್ವಹಣೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಪಾಜಿಟಿವ್‌ ಪ್ರಕರಣಗಳು ದಿನೇ-ದಿನೇ ಕಡಿಮೆ ಆಗುತ್ತಿರುವುದು ಜನರಿಗೆ ಸಮಾಧಾನಕರ ಸಂಗತಿಯಾಗಿದೆ. ಆದರೂ ಕೂಡ ಸುಮ್ಮನಾಗುವಂತಿಲ್ಲ. ಈಗ ಯಾವ-ಯಾವ ಹಳ್ಳಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆಯೋ ಅಲ್ಲಿ ಹೆಚ್ಚಿನ ರೀತಿಯಲ್ಲಿ ಕ್ರಮ ವಹಿಸಿ ಸೋಂಕು ಏರುಮುಖವಾಗದ ಹಾಗೆ ಆರಂಭದ ಹಂತದಲ್ಲೇ ಕಡಿವಾಣ ಹಾಕಿ ಪ್ರಕರಣಗಳು ಇಲ್ಲದ ಹಾಗೆ ಕ್ರಮ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ 18ರಿಂದ 44 ವಯೋಮಾನದವರಿಗೆ ಕೋವಿಡ್‌ ಲಸೀಕಾಕರವು ಯಶಸ್ವಿಯಾಗಿ ನಡೆದು ಎಲ್ಲ ಮುಂಚೂಣಿ ಕಾರ್ಯಕರ್ತರಿಗೆ ಮತ್ತು ದುರ್ಬಲ ಗುಂಪಿನ ಜನರ ಜೀವ ರಕ್ಷಣೆಯಾಗಬೇಕು. ಕೋವಿಡ್‌ ಪರೀಕ್ಷೆಯ ಪ್ರಮಾಣ ಕೂಡ ಹೆಚ್ಚಿಸಬೇಕು. ಮೊದಲನೇ ಡೋಸ್‌ ಪಡೆದ ಎಲ್ಲರಿಗೂ ತಪ್ಪದೇ ಎರಡನೇ ಡೋಸ್‌ ನೀಡುವ ಕಾರ್ಯವು ಕೂಡ ಏಕಕಾಲಕ್ಕೆ ನಡೆಯಬೇಕು. ಯಾವ-ಯಾವ ವಯೋಮಾನದವರು?, ಎಲ್ಲಿ?, ಯಾವಾಗ?, ಲಸಿಕೆ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಿನ ಪ್ರಚಾರ ನೀಡಬೇಕು.

ಸ್ಥಳೀಯ ಕೇಬಲ್‌ ಸುದ್ದಿ ವಾಹಿನಿಗಳ ಮೂಲಕವೂ ಕೂಡ ಹೆಚ್ಚಿನ ರೀತಿಯಲ್ಲಿ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಬೆಡ್‌ಗಳು, ವೆಂಟಿಲೇಟರ್‌, ಆಕ್ಸಿಜನ್‌, ಔಷಧ ಗಳು, ರೆಮ್‌ ಡೆಸಿವಿಯರ್‌ ಇಂಜೆಕ್ಷನ್‌ಗಳ ಕೊರತೆ ಆಗದಂತೆ, ಎಲ್ಲವೂ ಅಗತ್ಯ ಪ್ರಮಾಣದಲ್ಲಿ ಲಭ್ಯ ಇರುವಂತೆ ನೋಡಿಕೊಳ್ಳಬೇಕು ಎಂದು ಕಾರ್ಯದರ್ಶಿಗಳು ಸೂಚಿಸಿದರು.

ಬ್ಲ್ಯಾಕ್‌ ಫಂಗಸ್‌ ರೋಗಿಗಳು ಗುಣಮುಖ: ಬ್ಲ್ಯಾಕ್‌ ಫಂಗಸ್‌ ಪತ್ತೆಯಾದ ಜಿಲ್ಲೆಯ ಕೆಲವು ರೋಗಿಗಳು ಕಲಬುರಗಿ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನೂ ಕೆಲವರು ಗುಣಮುಖರಾಗುತ್ತಿದ್ದಾರೆ. ಬೀದರ ಜಿಲ್ಲೆಯಲ್ಲಿ ಬ್ಲ್ಯಾಕ್‌ ಫಂಗಸ್‌ ಸೋಂಕಿತರ ಪೈಕಿ ಇಬ್ಬರು 35 ವರ್ಷ ವಯೋಮಾನದವರು ಇನ್ನಿತರರು 40 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಿದ್ದಾರೆ ಎಂದು ಇದೆ ವೇಳೆ ಡಿಎಚ್‌ಒ ಡಾ| ವಿ.ಜಿ.ರೆಡ್ಡಿ ಸಭೆಗೆ ಮಾಹಿತಿ ನೀಡಿದರು.

Advertisement

ಯಾವ ಕಾರಣಕ್ಕೆ ಅವರಿಗೆ ಬ್ಲಾÂಕ್‌ ಫಂಗಸ್‌ ಸೋಂಕು ತಗುಲಿತು ಎಂಬುದರ ಬಗ್ಗೆ ತಾವು ಕೂಡ ಸರಿಯಾದ ರೀತಿಯಲ್ಲಿ ಅಧ್ಯಯನ ನಡೆಸಿ ಮಾಹಿತಿ ನೀಡಬೇಕು ಎಂದು ಇದೆ ವೇಳೆ ಉಸ್ತುವಾರಿ ಕಾರ್ಯದರ್ಶಿಗಳು ವೈದ್ಯಾ ಧಿಕಾರಿಗಳಿಗೆ ಸೂಚಿಸಿದರು. ಇದು ಸಾಮಾನ್ಯ ಕಾಯಿಲೆಯ ರೀತಿ ಇದೆ. ಎರಡನೇ ಅಲೆಯ ಈ ವೇಳೆಯಲ್ಲಿ ಸೋಂಕು ಹೆಚ್ಚಿಗೆ ಕಾಣಿಸುತ್ತಿದೆ ಎಂದು ಡಿಎಸ್‌ಒ ಡಾ| ಕೃಷ್ಣಾ ರೆಡ್ಡಿ ಅವರು ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು. ಬ್ಲಾÂಕ್‌ ಫಂಗಸ್‌ಗೆ ಪ್ರತ್ಯೇಕ ವಾರ್ಡ್‌: ಈ ವೇಳೆ ಡಿಸಿ ರಾಮಚಂದ್ರನ್‌ ಆರ್‌. ಅವರು ಮಾತನಾಡಿ, 18-44 ವಯೋಮಾನದ ದುರ್ಬಲ ವರ್ಗದವರು ಮತ್ತು ಫ್ರಂಟ್‌ಲೆçನ್‌ ವರ್ಕರ್ಗಳಿಗೆ ಕೋವಿಡ್‌ ಲಸಿಕೆ ನೀಡಿಕೆಗೆ ಸಂಬಂ ಧಿಸಿದಂತೆ ನೋಡಲ್‌ ಅ ಧಿಕಾರಿಗಳು ಮತ್ತು ಸಹಾಯಕ ನೋಡಲ್‌ ಅ ಧಿಕಾರಿಗಳನ್ನು ನೇಮಿಸಿ ಲಸಿಕಾಕರಣಕ್ಕೆ ಈಗ ಮೊದಲಾದ್ಯತೆ ನೀಡಿದ್ದು, ಜಿಲ್ಲಾದ್ಯಂತ ಅಚ್ಚುಕಟ್ಟಾದ ರೀತಿಯಲ್ಲಿ ಲಸಿಕಾಕರಣ ನಡೆಯುತ್ತಿದೆ.

ಬ್ಲ್ಯಾಕ್‌ ಫಂಗಸ್‌ ಪ್ರಕರಣಗಳ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ಬ್ಲಾÂಕ್‌ ಫಂಗಸ್‌ ಪಾಜಿಟಿವ್‌ ಮತ್ತು ಬ್ಲ್ಯಾಕ್‌ ಫಂಗಸ್‌ ನೆಗೆಟಿವ್‌ ಎಂದು ಎರಡು ಪ್ರತ್ಯೇಕ ವಾರ್ಡ್‌ಗಳನ್ನಾಗಿ ಮಾಡಿ ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಸಿಇಒ ಜಹೀರಾ ನಸೀಮ್‌, ಎಡಿಸಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಭುವನೇಶ ಪಾಟೀಲ್‌ ಇನ್ನಿತರ ಅ ಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next