Advertisement

ಅಮೇರಿಕಾದಲ್ಲಿ “ಟಗರು’ಪೊಗರು

09:00 PM Mar 08, 2018 | |

ಶಿವರಾಜಕುಮಾರ್‌ ಅಭಿನಯದ “ಟಗರು’ ಚಿತ್ರವು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಚಿತ್ರವನ್ನು ಸ್ಯಾಂಡಲ್‌ವುಡ್‌ ಗೆಳೆಯರ ಬಳಗದ ವತಿಯಿಂದ ಅಮೇರಿಕಾದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

Advertisement

ಹೌದು, ಇಂದಿನಿಂದ ಚಿತ್ರವು ಅಮೇರಿಕಾದ ವಿವಿಧ ನಗರಗಳಲ್ಲಿ ಬಿಡುಗಡೆಯಾಗುತ್ತಿದೆ. ಡೆಟ್ರಾಯ್‌, ಬೋಸ್ಟಾನ್‌, ಫಿಲಾಡೆಲ್ಫಿಯಾ, ಸ್ಯಾನ್‌ಡಿಯಾಗೋ, ಡೆನ್ವರ್‌ ಮುಂತಾದ ಶನಿವಾರ ಮತ್ತು ಭಾನುವಾರ (ಮಾರ್ಚ್‌ 10 ಮತ್ತು 11) ಪ್ರದರ್ಶನಗೊಂಡರೆ, ಅಟ್ಲಾಂಟ, ಚಿಕಾಗೋ, ದಲ್ಲಾಸ್‌, ವಾಷಿಂಗ್‌ಟನ್‌ ಡಿಸಿ ಮುಂತಾದ ಕಡೆ ಇಡೀ ವಾರ ಪ್ರದರ್ಶನಗೊಳ್ಳಲಿದೆ. “ಟಗರು’ ಚಿತ್ರವನ್ನು “ದುನಿಯಾ’ ಸೂರಿ ನಿರ್ದೇಶಿಸಿದ್ದಾರೆ.

ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಅವರದ್ದೇ. ಮಹೇಂದ್ರ ಸಿಂಹ ಛಾಯಾಗ್ರಹಣ ಮಾಡಿದರೆ, “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಖ್ಯಾತಿಯ ಚರಣ್‌ರಾಜ್‌ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಚಿತ್ರದಲ್ಲಿ ಶಿವರಾಜಕುಮಾರ್‌ ಅವರ ಜೊತೆಗೆ ಮಾನ್ವಿತಾ, ಭಾವನಾ ಮೆನನ್‌, ದೇವರಾಜ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ವಿಲನ್‌ ಆಗಿ ಧನಂಜಯ್‌ ಮತ್ತು ವಸಿಷ್ಠ ಸಿಂಹ ಕಾಣಿಸಿಕೊಂಡಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next