Advertisement

ಕೈಗೆ ಕಟ್ಟುವ ದಾರಕ್ಕೆ ನಿಜವಾಗಿಯೂ ಶಕ್ತಿ ಇದೆಯಾ?:ಭಗವಾನ್‌ ವ್ಯಂಗ್ಯ

03:46 PM Jul 26, 2018 | |

ಮೈಸೂರು : ಹಿಂದುಗಳ ಕೆಲ ಆಚರಣೆಗಳನ್ನು ಮೌಢ್ಯ ಎನ್ನುವ ಮೂಲಕ ವಿಚಾರವಾದಿ ಪ್ರೊಫೆಸರ್‌ ಕೆ.ಎಸ್‌.ಭಗವಾನ್‌ ಅವರು ಮತ್ತೆ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲವು ರಾಜಕಾರಣಿಗಳು ಕೈಗೆ ದಾರ ಕಟ್ಟಿಕೊಳ್ಳುತ್ತಿದ್ದಾರೆ.  ಕೈಗೆ ಕಟ್ಟಿಕೊಳ್ಳುವ ದಾರಗಳಿಗೆ ನಿಜವಾಗಿಯೂ ಶಕ್ತಿ ಇದೆಯಾ? ಶಕ್ತಿ ಇದ್ದರೆ ಗಡಿಗೆ ಹೋಗಲಿ. ಅಲ್ಲಿ ದಾರ ಪ್ರದರ್ಶಿಸಿದರೆ ವೈರಿಗಳು ಓಡಿ ಹೋಗುತ್ತಾರಾ ಎಂದು ಪ್ರಶ್ನಿಸಿದರು. 

ದೇಶವನ್ನು ಇಂದು ಪಂಚಾಂಗ ಆಳುತ್ತಿದೆ. ಮೌಢ್ಯಗಳು ತುಂಬಿ ಹೋಗಿವೆ. ಮೊದಲು ಇದನ್ನು ತಡೆಯಬೇಕಾಗಿದೆ. ಹೋಮ, ಹವನ ಮಾಡುವುದರಿಂದ ಎಲ್ಲವೂ ಸಾಧ್ಯ ಅಂತಾದರೆ , ಶತ್ರುಗಳು ಓಡಿ ಹೋಗುತ್ತಾರೆ ಅಂತಾದರೆ ನಾನು ಮೊದಲು ಅದನ್ನು ಮಾಡಲು ಆರಂಭಿಸುತ್ತೇನೆ ಎಂದರು. 

ಮಿಲಿಟರಿಗೆ ಯಾಕೆ ಸುಮ್ಮನೆ ಖರ್ಚು ಮಾಡುವುದು. ಆ ಹಣವನ್ನು ಯಾಗ ಮಾಡಲು ವಿನಿಯೋಗಿಸಲಿ ಎಂದು ವ್ಯಂಗ್ಯವಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next