Advertisement

ಫಾಲ್ಕೆ ಚಿತ್ರೋತ್ಸವದಲ್ಲಿ ‘ತಾಯಿ ಕಸ್ತೂರ್‌ ಗಾಂಧಿ’

05:04 PM Apr 21, 2022 | Team Udayavani |

ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ “ತಾಯಿ ಕಸ್ತೂರ್‌ ಗಾಂಧಿ’ ಕನ್ನಡ ಚಿತ್ರವು 12ನೇ ದಾದಾ ಸಾಹೇಬ್‌ ಫಾಲ್ಕೆ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ.

Advertisement

ಚಿತ್ರವು ಈಗಾಗಲೇ ಲಾಸ್‌ ಏಂಜಲೀಸ್‌ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸಿದೆ. ದೆಹಲಿಯ ಸಂಸ್ಥೆಯೊಂದು ದಾದಾ ಸಾಹೇಬ್‌ ಫಾಲ್ಕೆ ಅವರ ಜನ್ಮದಿನದಂದು ಹನ್ನೊಂದು ವರ್ಷಗಳಿಂದ ಈ ಚಿತ್ರೋತ್ಸವವನ್ನು ನಡೆಸಿಕೊಂಡು ಬಂದಿದೆ.

ಇದನ್ನೂ ಓದಿ:ಆ್ಯಡಂ ಮಿಲ್ನೆ ಬದಲು ಸಿಎಸ್ ಕೆ ತಂಡ ಸೇರಿದ ಜೂನಿಯರ್ ಲಸಿತ್ ಮಾಲಿಂಗ

ಈ ಚಿತ್ರೋತ್ಸವಕ್ಕೆ ಆಯ್ಕೆಯಾದ “ತಾಯಿ ಕಸ್ತೂರ್‌ ಗಾಂಧಿ’ ಚಿತ್ರವು ಬರಗೂರರ “ಕಸ್ತೂರ್‌ ಬಾ ವರ್ಸಸ್‌ ಗಾಂಧಿ’ ಎಂಬ ಕಾದಂಬರಿಯನ್ನು ಆಧರಿಸಿದೆ. ಬರಗೂರರೇ ಚಿತ್ರಕತೆ, ಸಂಭಾಷಣೆ ಮತ್ತು ಗೀತೆಗಳನ್ನು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next