ಬೆಳಗಾವಿ: ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ ಕಾನೂನು ಸಚಿವ ಎಚ್ ಕೆ ಪಾಟೀಲ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು ಗಾಂಧಿ ಭಾರತ್ ಕಾರ್ಯಕ್ರಮಕ್ಕಾಗಿ ನಾವು ಸರ್ಕಾರಿ ಅನುದಾನ ವ್ಯಯಿಸುತ್ತಿದ್ದೇವೆ. ಇದು ವ್ಯರ್ಥ ಎನ್ನುವುದಾದರೆ, ಜಗದೀಶ ಶೆಟ್ಟರ್ ಅವರು ಗಾಂಧಿ ಕುರಿತಾಗಿ ತಾತ್ಸಾರ ನಿಲುವು ಹೊಂದಿರುವುದು ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ದೇಶದಲ್ಲಿ ಎರಡೇ ವಿಚಾರಧಾರೆ ಇವೆ. ಒಂದು ಗಾಂಧಿ ಭಾರತ್ ಮತ್ತು ಗೋಡ್ಸೆ ಭಾರತ್. ಗಾಂಧಿ ಭಾರತ್ ಕಾರ್ಯಕ್ರಮದಲ್ಲಿ ನಾವೆಲ್ಲರೂ ಸಂತಸದಿಂದ ಇರುವಾಗ, ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವದ ಸಂಗತಿ ಎಂದಿದ್ದಾರೆ.
ಗಾಂಧಿ ಕೊಂದವರನ್ನು ಯಾರು ಸಮರ್ಥಿಸಿಕೊಳ್ಳುತ್ತಾರೆಯೋ, ಅವರು ಹೀಗೆ ಹೇಳಿಕೆ ಕೊಟ್ಟರೆ ಏನು ಹೇಳುವುದು ಎಂದು ವಾಗ್ದಾಳಿ ನಡೆಸಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಎಲ್ಲ ಪಕ್ಷದವರನ್ನೂ ಆಹ್ವಾನಿಸಿದ್ದೇವೆ. ಇದು ಸರ್ಕಾರಿ ಕಾರ್ಯಕ್ರಮ ಎಂದು ಸಚಿವ ಎಚ್ ಕೆ ಪಾಟೀಲ ಸ್ಪಷ್ಟನೆ ನೀಡಿದ್ದಾರೆ.