Advertisement
ಇಂಗ್ಲೆಂಡ್ನ ಹಾದಿಗೆ ಅಡ್ಡಿಯಾದ ಮಳೆ!ಇಂಗ್ಲೆಂಡ್ ಹಾಲಿ ಚಾಂಪಿಯನ್. ಆದರೆ ಈ ಬಾರಿ ಮೊದಲ ಸುತ್ತಿನಲ್ಲೇ ಪಂದ್ಯಾವಳಿಯಿಂದ ಹೊರ ಬೀಳುವ ಭೀತಿಯನ್ನು ಎದುರಿಸುತ್ತಿದೆ. “ಬಿ’ ಗುಂಪಿನ ಇಂಗ್ಲೆಂಡ್-ಸ್ಕಾಟ್ಲೆಂಡ್ ನಡುವಿನ ಮೊದಲ ಪಂದ್ಯ ಮಳೆ ಯಿಂದ ರದ್ದಾಗಿತ್ತು. ಹೀಗಾಗಿ ಒಂದು ಅಂಕ ಹಂಚಿಕೊಂಡಿತ್ತು. ಆಸ್ಟ್ರೇ ಲಿಯ ವಿರುದ್ಧ 36 ರನ್ಸೋಲು ಅನುಭವಿಸಿತು. ಇಂಗ್ಲೆಂಡ್ 4ನೇ ಸ್ಥಾನದಲ್ಲಿದೆ.
ನ್ಯೂಜಿಲ್ಯಾಂಡ್ಗೆ ಸಂಕಷ್ಟ ತಂದೊಡ್ಡಿದ ಅಫ್ಘಾನ್ ಸ್ಪಿನ್!
ನ್ಯೂಜಿಲ್ಯಾಂಡ್ “ಸಿ’ ಗುಂಪಿನಿಂದ ಹೊರ ಬೀಳುವ ಆತಂಕಕ್ಕೆ ಸಿಲುಕಿರುವುದಕ್ಕೆ ಕಾರಣ, ಅಫ್ಘಾನಿಸ್ಥಾನದ ಸ್ಪಿನ್ ಮೋಡಿ. ಇದರಿಂದ ಕಿವೀಸ್ 84 ರನ್ಗಳ ಭಾರೀ ಸೋಲನುಭವಿಸಿತು. ಹೀಗಾಗಿ ತಂಡದ ರನ್ರೇಟ್ -4.200ಕ್ಕೆ ಇಳಿದಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇನ್ನೂ 3 ಪಂದ್ಯ ಉಳಿದಿದ್ದರೂ ಒಂದು ಪಂದ್ಯದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ಎದುರಾಗಲಿದೆ. .
Related Articles
“ಡಿ’ ಗುಂಪಿನ ಶ್ರೀಲಂಕಾ ಸ್ಥಿತಿಯೂ ಚಿಂತಾ ಜನಕವಾಗಿದೆ. ಅದು ಈಗಾಗಲೇ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶದ ವಿರುದ್ಧ ಸೋಲು ಕಂಡಿದೆ. ಗುಂಪಿನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದು, -0.777 ರನ್ರೇಟ್ ಹೊಂದಿದೆ. ಲಂಕಾಗೆ 2 ಪಂದ್ಯಗಳು ಬಾಕಿ ಇವೆ. ಎರಡನ್ನೂ ಗೆದ್ದರೂ ಮುಂದಿನ ಸುತ್ತಿಗೆ ಏರುವುದು ಉಳಿದ ತಂಡಗಳ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ. ಸದ್ಯದ ಮಟ್ಟಿಗೆ ಲಂಕೆಯ ಬಾಗಿಲು ಬಂದ್ ಆಗಿದೆ.
Advertisement
ಇದನ್ನೂ ಓದಿ: Mumbai: ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ನ್ಯೂಯಾರ್ಕ್ನಲ್ಲಿ ನಿಧನ